alex Certify
ಕನ್ನಡ ದುನಿಯಾ       Mobile App
       

Kannada Duniya

ಶಿಕ್ಷೆಗೆ ಬೇಸತ್ತು 11ನೇ ಮಹಡಿಯಿಂದ ಜಿಗಿದ ಬಾಲಕಿ

ಫರಿದಾಬಾದ್ ನಲ್ಲಿ ಮನಕಲಕುವ ಘಟನೆ ನಡೆದಿದೆ. 12 ವರ್ಷದ ಬಾಲಕಿಯೊಬ್ಬಳು ಮನೆ ಮಾಲೀಕಳ ಹಿಂಸೆಗೆ ಬೇಸತ್ತು 11ನೇ ಮಹಡಿಯಿಂದ ಕೆಳಗೆ ಜಿಗಿದಿದ್ದಾಳೆ. ಆದ್ರೆ ಸಾವು ನಮ್ಮ ಕೈನಲ್ಲಿಲ್ಲ ಎಂಬಂತೆ ಆಕೆ ಬದುಕಲ್ಲಿ ಚಮತ್ಕಾರ ನಡೆದಿದೆ.

ಸೆಕ್ಟರ್ 37ರ ಕನಿಷ್ಕಾ ಅಪಾರ್ಟ್ಮೆಂಟ್ ನ 11ನೇ ಮಹಡಿಯಿಂದ ಬಾಲಕಿ ನೆಗೆದಿದ್ದಾಳೆ. ಆದ್ರೆ 9ನೇ ಮಹಡಿಗೆ ಹಾಕಿದ್ದ ಬಲೆಯಲ್ಲಿ ಸಿಕ್ಕಿ ಬಿದ್ದಿದ್ದಾಳೆ. ಫ್ಲಾಟ್ ಮಾಲೀಕನಿಗೆ ಬಾಲಕಿ ಕಾಣಿಸಿದ್ದು, ತಕ್ಷಣ ಆಕೆಯನ್ನು ರಕ್ಷಿಸಿದ್ದಾನೆ. ಆದ್ರೆ ಬಾಲಕಿ ದೇಹದ ಮೇಲಾಗಿರುವ ಗಾಯ ನೋಡಿ ಕಂಗಾಲಾಗಿದ್ದಾನೆ. ಆಕೆಯ ಮೈ ಮೇಲೆಲ್ಲ ಸುಟ್ಟ ಗಾಯಗಳಾಗಿವೆ.

ವಿಚಾರಣೆ ವೇಳೆ ಮನೆ ಮಾಲೀಕಳ ಕ್ರೌರ್ಯ ಬಹಿರಂಗವಾಗಿದೆ. ಮಾತು ಮಾತಿಗೂ ಬಿಹಾರ ಮೂಲದ 12 ವರ್ಷದ ಸ್ನೇಹಾಳನ್ನು ಮಾಲೀಕೆ ಹೊಡೆಯುತ್ತಿದ್ದಳಂತೆ. ಮನೆಯಿಂದ ಹೊರಗೆ ಹೋಗಲು ಬಿಡದೆ ಸರಿಯಾಗಿ ಆಹಾರ ನೀಡುತ್ತಿರಲಿಲ್ಲವಂತೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...