alex Certify
ಕನ್ನಡ ದುನಿಯಾ       Mobile App
       

Kannada Duniya

ತಂದೆ, ಸಹೋದರನಿಂದ ಅತ್ಯಾಚಾರ–8 ಬಾರಿ ತಾಯಿ ಮಾಡಿಸಿದ್ಲು ಗರ್ಭಪಾತ

ಲಕ್ನೋದ ಅಲಹಾಬಾದ್ ನಲ್ಲಿ ಸೆಪ್ಟೆಂಬರ್ 6,2013 ರಂದು ಭಯಾನಕ ಪ್ರಕರಣವೊಂದು ಬೆಳಕಿಗೆ ಬಂದಿತ್ತು. ಯುವತಿಯೊಬ್ಬಳು ನರಕದಿಂದ ಹೊರ ಬಂದು ತನ್ನ ನೋವನ್ನು ಪೊಲೀಸ್ ಮುಂದಿಟ್ಟಿದ್ದಳು. ಆಕೆಗೆ ಶತ್ರುವಾಗಿದ್ದು ಬೇರೆ ಯಾರೂ ಅಲ್ಲ. ಆಕೆ ತಂದೆ-ತಾಯಿ ಮತ್ತು ಸಹೋದರ. ತಂದೆ-ಸಹೋದರ ಸತತ 9 ವರ್ಷಗಳ ಕಾಲ ಅತ್ಯಾಚಾರವೆಸಗಿದ್ರೆ ತಾಯಿಯಾದವಳು 8 ಬಾರಿ ಮಗಳ ಗರ್ಭಪಾತ ಮಾಡಿಸಿದ್ದಳು.

ಆ ದಿನಗಳನ್ನು ಪೀಡಿತ ಯುವತಿ ಮತ್ತೆ ನೆನಪು ಮಾಡಿಕೊಂಡಿದ್ದಾಳೆ. 14 ವರ್ಷದವರೆಗೆ ಆಕೆ ಅಜ್ಜಿ ಮನೆಯಲ್ಲಿದ್ದಳಂತೆ. ಗೃಹ ಪ್ರವೇಶಕ್ಕೆಂದು ತಂದೆ ಮನೆಗೆ ಬಂದಿದ್ದಳಂತೆ. ಆ ದಿನ ತಂದೆ ಆರೋಗ್ಯ ಹದಗೆಟ್ಟಿತ್ತಂತೆ. ವೈದ್ಯರ ಬಳಿ ಹೋಗುವ ಬದಲು ತಂದೆ ತಾಂತ್ರಿಕನ ಬಳಿ ಹೋದ್ನಂತೆ.

ಮಗಳ ಜೊತೆ ಸಂಬಂಧ ಬೆಳೆಸಿದ್ರೆ ಮಾತ್ರ ನಿನ್ನ ಜೀವ ಉಳಿಯಲು ಸಾಧ್ಯವೆಂದು ತಾಂತ್ರಿಕ ಸಲಹೆ ಕೊಟ್ಟನಂತೆ. ಅಲ್ಲಿಂದ 9 ವರ್ಷಗಳ ಕಾಲ ತಂದೆ-ಸಹೋದರನ ಅಡಿಯಾಳಾದ ಯುವತಿ ಒಂದು ದಿನ ಸುಳ್ಳು ಹೇಳಿ ಮನೆಯಿಂದ ಬಂದು ದೂರು ನೀಡಿದ್ದಳಂತೆ. ಸದ್ಯ ತಂದೆ-ತಾಯಿ ಹಾಗೂ ಸಹೋದರ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.

ಸರ್ಕಾರಿ ನೌಕರಿಗೆ ಅರ್ಜಿ ಸಲ್ಲಿಸಿದ್ದ ಯುವತಿ ಹೊಟ್ಟೆಪಾಡಿಗಾಗಿ ಬ್ಯೂಟಿಪಾರ್ಲರ್ ನಡೆಸುತ್ತಿದ್ದಾಳೆ. 25 ಸಾವಿರ ತಿಂಗಳಿಗೆ ದುಡಿಯುವ ಯುವತಿ ಏಕಾಂಗಿಯಾಗಿ ಜೀವನದ ಹೋರಾಟ ನಡೆಸುತ್ತಿದ್ದಾಳೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...