alex Certify
ಕನ್ನಡ ದುನಿಯಾ       Mobile App
       

Kannada Duniya

ಮನ ಕಲಕುತ್ತೆ ಈ ಯುವತಿಯ ಕರುಣಾಜನಕ ಕಥೆ

ಉತ್ತರ ಪ್ರದೇಶದ ಝಾನ್ಸಿಯಲ್ಲಿ 5 ತಿಂಗಳುಗಳ ಕಾಲ ಯುವತಿಯನ್ನು ಕೂಡಿಹಾಕಿ ಅತ್ಯಾಚಾರವೆಸಗಿದ ಪ್ರಕರಣ ಬೆಳಕಿಗೆ ಬಂದಿದೆ. ಯಾಕೆ ಹೀಗೆ ಮಾಡ್ತಿದ್ದೀಯಾ ಎಂಬ ಯುವತಿ ಪ್ರಶ್ನೆಗೆ ಆರೋಪಿ ಯುವಕ, ನೀನು ನನಗೆ ಇಷ್ಟ. ಹಾಗಾಗಿ ರೇಪ್ ಮಾಡ್ತೇನೆ ಎಂದಿದ್ದನಂತೆ. ಪೊಲೀಸ್ ಠಾಣೆಯಲ್ಲಿ ತನ್ನ ನೋವಿನ ಕಥೆ ಹೇಳ್ತಾ ಪ್ರಜ್ಞೆ ತಪ್ಪಿದ ಯುವತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಮೇ17 ರಂದು ನೆರೆ ಮನೆಯಲ್ಲಿ ವಾಸವಾಗಿರುವ ಪುಷ್ಪಾ ಎಂಬಾಕೆ ಈ ಯುವತಿಯನ್ನು ಮುಂಬೈಗೆ ಕರೆದಿದ್ದಳು ಎನ್ನಲಾಗಿದೆ. ಮನೆಯಲ್ಲಿರುವ ಒಡವೆ, ಬಂಗಾರದ ಜೊತೆ ಯುವತಿ ಆಕೆ ಜೊತೆ ಹೋಗಿದ್ದಳಂತೆ. ಝಾನ್ಸಿಯ ಶಿವಾಜಿನಗರದಲ್ಲಿರುವ ಮನೆಯೊಂದಕ್ಕೆ ಎಲ್ಲರೂ ಹೋಗಿದ್ದಾರೆ. ಟೀ ಕುಡಿದು ಮನೆಯಿಂದ ಎಲ್ಲರೂ ಹೊರ ಬಿದ್ದರೆ ಪೀಡಿತೆ ಹಾಗೂ ಪವನ್ ಇಬ್ಬರೇ ಇದ್ದರು ಎನ್ನಲಾಗಿದೆ.

ಪವನ್ ಆಕೆ ಬಾಯಿ ಕಟ್ಟಿ ಪ್ರಜ್ಞೆ ತಪ್ಪುವ ಔಷಧಿ ನೀಡಿ ಅತ್ಯಾಚಾರವೆಸಗಿದ್ದಾನೆ. ಎರಡು ದಿನದ ನಂತ್ರ ಯುವತಿಯನ್ನು ತನ್ನ ಮನೆಗೆ ಕರೆದೊಯ್ದು 5 ತಿಂಗಳ ಕಾಲ ಅತ್ಯಾಚಾರವೆಸಗಿದ್ದಾನಂತೆ. ಆಕೆ ಕಾವಲಿಗೆ ಪವನ್ ತಂದೆ-ತಾಯಿಯಿದ್ದರು ಎನ್ನಲಾಗಿದೆ. ಪವನ್ ಮನೆಯಲ್ಲಿ ಸಿಕ್ಕ ಫೋನ್ ಮೂಲಕ ಮನೆಗೆ ಕರೆ ಮಾಡಿದ ಯುವತಿ ವಿಷ್ಯ ತಿಳಿಸಿದ್ದಾಳೆ. ಮನೆಯವರು ಪೀಡಿತೆಯಿದ್ದ ಸ್ಥಳಕ್ಕೆ ಬಂದು ಆಕೆಯನ್ನು ರಕ್ಷಿಸಿದ್ದಾರೆ. ಆದ್ರೆ ತನ್ನ ಬಳಿ ಅಶ್ಲೀಲ ಫೊಟೋವಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ರೆ ಇದನ್ನು ಸಾಮಾಜಿಕ ಜಾಲತಾಣಕ್ಕೆ ಹರಿಬಿಡುವುದಾಗಿ ಪವನ್ ಹೆದರಿಸಿದ್ದನಂತೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...