alex Certify
ಕನ್ನಡ ದುನಿಯಾ       Mobile App
       

Kannada Duniya

ವಿದ್ಯಾರ್ಥಿನಿಗೆ ಹುಡುಗ್ರ ಶೌಚಾಲಯದೊಳಗೆ ನಿಲ್ಲುವ ಶಿಕ್ಷೆ

ಹೈದ್ರಾಬಾದ್ ನ ಖಾಸಗಿ ಶಾಲೆಯೊಂದರಲ್ಲಿ ದಂಗಾಗಿಸುವ ಘಟನೆ ನಡೆದಿದೆ. ಟೀಚರ್ ಒಬ್ಬರು 11 ವರ್ಷದ ಹುಡುಗಿಯನ್ನು ಗಂಡು ಮಕ್ಕಳ ಶೌಚಾಲಯದೊಳಗೆ ನಿಲ್ಲುವ ಶಿಕ್ಷೆ ನೀಡಿದ್ದಾರೆ. ವಿದ್ಯಾರ್ಥಿನಿ ಸಮವಸ್ತ್ರ ಧರಿಸಿ ಬರದಿರುವುದೇ ಇದಕ್ಕೆ ಕಾರಣವಾಗಿದೆ.

ವಿದ್ಯಾರ್ಥಿನಿ ತಾಯಿ ಸಮವಸ್ತ್ರವನ್ನು ತೊಳೆದಿದ್ದಳಂತೆ. ಹಾಗಾಗಿ ಹುಡುಗಿ ಬಣ್ಣದ ಡ್ರೆಸ್ ನಲ್ಲಿ ಸ್ಕೂಲಿಗೆ ಬಂದಿದ್ದಳು. ಈ ಬಗ್ಗೆ ಪಾಲಕರು ಶಾಲಾ ಡೈರಿಯಲ್ಲಿ ಕಾರಣ ಬರೆದು ಕಳುಹಿಸಿದ್ದರಂತೆ. ಆದ್ರೆ ಇದನ್ನು ಲೆಕ್ಕಿಸದ ಟೀಚರ್, ಹುಡುಗರ ಶೌಚಾಲಯದಲ್ಲಿ ಹುಡುಗಿಯನ್ನು ನಿಲ್ಲಿಸಿದ್ದಾರೆ.

ಇದ್ರಿಂದ ಹೆದರಿದ ವಿದ್ಯಾರ್ಥಿನಿ ಶಾಲೆಗೆ ಹೋಗಲು ನಿರಾಕರಿಸಿದ್ದಾಳೆ. ಮಗಳಿಗೆ ಧೈರ್ಯ ಹೇಳಿ ವಿಷ್ಯ ತಿಳಿದುಕೊಂಡಿದ್ದಾರೆ ಪಾಲಕರು. ಜೊತೆಗೆ ಸೂಕ್ತ ತನಿಖೆಗೆ ಆದೇಶ ನೀಡುವಂತೆ ಶಾಲಾ ಆಡಳಿತ ಮಂಡಳಿಗೆ ಆಗ್ರಹಿಸಿದ್ದಾರೆ. ಕಳೆದ ನಾಲ್ಕು ದಿನಗಳಲ್ಲಿ ಬೇರೆ ಬೇರೆ ಶಾಲೆಗಳಲ್ಲಿ ನಾಲ್ಕಕ್ಕೂ ಹೆಚ್ಚು ಅಪರಾಧ ಘಟನೆಗಳು ನಡೆದಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...