alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೊಂದು ನಿರ್ಭಯಾ ಪ್ರಕರಣ: ನರಳಿ ನರಳಿ ಜೀವ ಬಿಟ್ಟ ಬಾಲಕಿ

ಅತ್ಯಾಚಾರದ ವಿರುದ್ಧ ಎಷ್ಟು ಕಠಿಣ ಕಾನೂನು ಬಂದ್ರೂ ಅತ್ಯಾಚಾರ ಪ್ರಕರಣ ಮಾತ್ರ ನಿಲ್ಲುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ಬಾಲಕಿಯರೇ ಕಾಮುಕರ ಟಾರ್ಗೆಟ್. ಗುರುಗ್ರಾಮ್ ನಲ್ಲಿ ಮತ್ತೊಂದು ನಿರ್ಭಯಾ ಪ್ರಕರಣ ನಡೆದಿದೆ. ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಖಾಸಗಿ ಅಂಗಕ್ಕೆ ಮರದ ತುಂಡನ್ನು ಹಾಕಲಾಗಿದೆ.

ಭಾನುವಾರ ಬಾಲಕಿ ನಾಪತ್ತೆಯಾಗಿದ್ದಳು. ಸೋಮವಾರ ಮನೆಯೊಂದರಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕಿ ಶವ ಸಿಕ್ಕಿದೆ. ಬಾಲಕಿ ಸ್ಥಿತಿ ನೋಡಿ ವೈದ್ಯರೇ ದಂಗಾಗಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು, ಅತ್ಯಾಚಾರದ ನಂತ್ರ ಬಾಲಕಿ ಖಾಸಗಿ ಅಂಗಕ್ಕೆ ಮರದ ತುಂಡನ್ನು ಹಾಕಲಾಗಿದೆ. ನಂತ್ರ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದಿದ್ದಾರೆ.

ಪಕ್ಕದ ಮನೆಯ ವ್ಯಕ್ತಿಯೇ ಈ ಕೃತ್ಯವೆಸಗಿದ್ದಾನೆ ಎನ್ನಲಾಗ್ತಿದೆ. ಭಾನುವಾರ ಬೆಳಿಗ್ಗೆ ಮನೆ ಮುಂದೆ ಆಡ್ತಿದ್ದ ಬಾಲಕಿಗೆ ಟೊಪ್ಪಿ ಕೊಡಿಸುವ ಆಸೆ ತೋರಿಸಿ ಕರೆದೊಯ್ದಿದ್ದಾನೆ ಎಂದು ಕೆಲವರು ಹೇಳ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...