alex Certify
ಕನ್ನಡ ದುನಿಯಾ       Mobile App
       

Kannada Duniya

5 ದಿನ ಫ್ಲಾಟ್ ನಲ್ಲಿ ಬಂಧಿ ಮಾಡಿ ಅತ್ಯಾಚಾರವೆಸಗಿದ ಪಾಪಿ

ಬಿಹಾರದ ಭಾಗಲ್ಪುರ ಜಿಲ್ಲೆ ಹನುಮಾನ್ ನಗರದ ಭಹವತಿ ಅಪಾರ್ಟ್ಮೆಂಟ್ ನಲ್ಲಿ ನಡೆದ 12ನೇ ತರಗತಿ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಕಳೆದ ಐದು ದಿನಗಳಿಂದ ಮನೀಶ್ ಅಲಿಯಾಸ್ ಅವಿನಾಶ್ ಅಲಿಯಾಸ್ ಬೋವಾ ತನ್ನನ್ನು ಫ್ಲಾಟ್ ನಲ್ಲಿ ಬಂಧಿ ಮಾಡಿದ್ದ. ಸತತ ಐದು ದಿನಗಳ ಕಾಲ ಪ್ರಜ್ಞೆ ತಪ್ಪಿಸಿ ಅತ್ಯಾಚಾರವೆಸಗಿದ್ದಾನೆಂದು ವಿದ್ಯಾರ್ಥಿನಿ ಹೇಳಿದ್ದಾಳೆ.

ನವೆಂಬರ್ 15ರಂದು ಟ್ಯೂಷನ್ ಮುಗಿಸಿ ಬರ್ತಿದ್ದ ವೇಳೆ ಮನೀಶ್ ವಿದ್ಯಾರ್ಥಿನಿಯನ್ನು ಕಿಡ್ನಾಪ್ ಮಾಡಿದ್ದಾನಂತೆ. ನಂತ್ರ ಆಕೆಯನ್ನು ಫ್ಲಾಟ್ ನಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡುತ್ತಿದ್ದನಂತೆ. ಮೂರ್ನಾಲ್ಕು ಹುಡುಗರ ಜೊತೆ ವಿದ್ಯಾರ್ಥಿನಿಯನ್ನು ಪರೀಕ್ಷೆಗೆ ಕಳುಹಿಸುತ್ತಿದ್ದ ಮನೀಶ್ ಮತ್ತೆ ಮನೆಯಲ್ಲಿ ಕೂಡಿ ಹಾಕ್ತಿದ್ದನಂತೆ.

ವಿದ್ಯಾರ್ಥಿನಿ ಪ್ರಜ್ಞೆ ತಪ್ಪಿಸಿ ಅತ್ಯಾಚಾರವೆಸಗುತ್ತಿದ್ದ ಎಂದು ವಿದ್ಯಾರ್ಥಿನಿ ದೂರಿದ್ದಾಳೆ. ನವೆಂಬರ್ 19ರಂದು ಕುಡಿದ ನಶೆಯಲ್ಲಿದ್ದ ಮನೀಶ್ ಸ್ನೇಹಿತ ಮೊದಲು ರೇಪ್ ಮಾಡಿದ್ದಾನೆ, ನಂತ್ರ ಮನೀಶ್. ಕುಡಿದು ಮನೀಶ್ ಪ್ರಜ್ಞೆ ತಪ್ಪುತ್ತಿದ್ದಂತೆ ಅಲ್ಲಿಂದ ತಪ್ಪಿಸಿಕೊಂಡು ಬಂದು ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ವಿದ್ಯಾರ್ಥಿನಿ ಹೇಳಿದ್ದಾಳೆ. ಆದ್ರೆ ಈವರೆಗೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲವೆಂದು ವಿದ್ಯಾರ್ಥಿನಿ ತಂದೆ ಆರೋಪಿಸಿದ್ದಾರೆ. ಆರೋಪಿಗಳನ್ನು ಬಂಧಿಸಿ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...