alex Certify
ಕನ್ನಡ ದುನಿಯಾ       Mobile App
       

Kannada Duniya

ಶಿಕ್ಷಕಿಯ ಮೇಲೆ ವಿದ್ಯಾರ್ಥಿನಿಗೆ ಪ್ರೇಮ, ಅಡ್ಡಿಪಡಿಸಿದ ತಾಯಿಗೆ ಮಾಡಿದ್ದೇನು?

ಗಾಜಿಯಾಬಾದ್ ನಲ್ಲಿ 18 ವರ್ಷದ ಯುವತಿಯೊಬ್ಬಳು ತನ್ನ ತಾಯಿಯನ್ನೇ ಹತ್ಯೆ ಮಾಡಿದ್ದಾಳೆ. ವಿದ್ಯಾರ್ಥಿನಿ ತನ್ನ ಶಿಕ್ಷಕಿಯೊಂದಿಗೇ ಸಂಬಂಧ ಹೊಂದಿದ್ಲು. ಕಳೆದ ಸಪ್ಟೆಂಬರ್ ನಲ್ಲಿ 35 ವರ್ಷದ ಆ ಮಹಿಳೆ ಜೊತೆಗೇ ಉಳಿದುಕೊಳ್ಳಲು ಆರಂಭಿಸಿದ್ಲು.

ಆದ್ರೆ ಆ ಸಮಯದಲ್ಲಿ ಅವಳಿನ್ನೂ ಅಪ್ರಾಪ್ತೆಯಾಗಿದ್ದರಿಂದ ವಾಪಸ್ ಮನೆಗೆ ಕರೆತರಲಾಗಿತ್ತು. ಆ ಶಿಕ್ಷಕಿಯ ಸಹವಾಸ ಬಿಡುವಂತೆ ತಾಯಿ ಮಗಳನ್ನು ಒತ್ತಾಯಿಸುತ್ತಿದ್ಲು. ಶುಕ್ರವಾರ ಬೆಳಗ್ಗೆ ಕೂಡ ಅದೇ ವಿಚಾರಕ್ಕೆ ಅಮ್ಮ-ಮಗಳ ಮಧ್ಯೆ ಜಗಳವಾಗಿದೆ.

ಆ ಸಮಯದಲ್ಲಿ ತಂದೆ ಸತೀಶ್ ಕೆಲಸಕ್ಕೆ ಹೋಗಿದ್ದ. ಕಿರಿಯ ಮಗಳು ಶಾಲೆಗೆ ತೆರಳಿದ್ಲು. ವಾಪಸ್ ಬರುವಷ್ಟರಲ್ಲಿ ತಾಯಿ ರಕ್ತದ ಮಡುವಿನಲ್ಲಿ ಬಿದ್ದಿದ್ಲು. ಹಿರಿಯ ಮಗಳೇ ತನ್ನ ತಲೆ ಮೇಲೆ ಭಾರವಾದ ವಸ್ತುವೊಂದನ್ನು ಎತ್ತಿಹಾಕಿರೋದಾಗಿ ಹೇಳಿದ್ದಾಳೆ.

ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಮೃತಪಟ್ಟಿದ್ದಾಳೆ. ಆರೋಪಿ ಯುವತಿ ಹಾಗೂ ಶಿಕ್ಷಕಿ ಇಬ್ಬರೂ ನಾಪತ್ತೆಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...