alex Certify
ಕನ್ನಡ ದುನಿಯಾ       Mobile App
       

Kannada Duniya

ಐಸಿಯುವಿನಲ್ಲಿ ನಡೆದಿದೆ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ

ದೇಶದಲ್ಲಿ ಅತ್ಯಾಚಾರಗಳ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗ್ತಿದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಯಾವ ಮಹಿಳೆಯೂ ಸುರಕ್ಷಿತಳಲ್ಲ. ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ಐಸಿಯುವಿನಲ್ಲಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ.

ಚಿಕಿತ್ಸೆಗೆ ಐಸಿಯುವಿನಲ್ಲಿ ದಾಖಲಾಗಿದ್ದ ಬಾಲಕಿ ಕಣ್ಣು ಕಟ್ಟಿ, ಕೈಕಾಲು ಕಟ್ಟಿ ಐದು ಮಂದಿ ಅತ್ಯಾಚಾರವೆಸಗಿದ್ದಾರೆ. ಕಣ್ಣಿಗೆ ಕಟ್ಟಿದ್ದ ಪಟ್ಟಿಯನ್ನು ಎರಡು ದಿನಗಳ ನಂತ್ರ ತೆಗೆಯಲಾಗಿದೆ. ಶುಕ್ರವಾರ ಬಾಲಕಿ ಅಜ್ಜನಿಗೆ ವಿಷ್ಯ ತಿಳಿಸಿದ್ದಾಳೆ ಎನ್ನಲಾಗಿದೆ. ಅಜ್ಜನ ದೂರಿನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

16 ವರ್ಷದ ಬಾಲಕಿಗೆ ವಿಷಯುಕ್ತ ಕೀಟ ಕಚ್ಚಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಲಕಿ ಪರಿಸ್ಥಿತಿ ಗಂಭೀರವಾಗಿದ್ದರಿಂದ ಐಸಿಯುವಿನಲ್ಲಿ ಚಿಕಿತ್ಸೆ ನಡೆಯುತ್ತಿತ್ತು. ಎರಡು ದಿನಗಳ ನಂತ್ರ ಪರಿಸ್ಥಿತಿ ಸುಧಾರಿಸಿದೆ. ಇದನ್ನು ನೋಡಿದ ಐವರು ಆಸ್ಪತ್ರೆ ಸಿಬ್ಬಂದಿ ತಮ್ಮ ಚಟ ತೀರಿಸಿಕೊಂಡಿದ್ದಾರೆ. ಸಿಸಿ ಟಿವಿ ದೃಶ್ಯಗಳು ನಾಶವಾಗಿದ್ದು, ಪೊಲೀಸರು ಈವರೆಗೆ ಯಾವುದೇ ಸಿಬ್ಬಂದಿಯನ್ನು ಬಂಧಿಸಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...