alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಕಿ ವೈದ್ಯಕೀಯ ಪರೀಕ್ಷೆ ವೇಳೆ ದಂಗಾದ ವೈದ್ಯರು

ಮಧ್ಯಪ್ರದೇಶದಲ್ಲಿ ದಿನದಿನಕ್ಕೂ ಅತ್ಯಾಚಾರ ಪ್ರಕರಣ ಹೆಚ್ಚಾಗ್ತಿದೆ. ಭೋಪಾಲ್ ನ ರೈಲ್ವೆ ನಿಲ್ದಾಣದ ಬಳಿ 12 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಪ್ರಕರಣ ಬೆಳಕಿಗೆ ಬಂದಿದೆ. ನವೆಂಬರ್ 3ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ.

ಆರಂಭದಲ್ಲಿ ಪ್ರಕರಣ ದಾಖಲಿಸಿಕೊಳ್ಳಲು ನಿರಾಕರಿಸಿದ ಪೊಲೀಸರು ಸುದ್ದಿ ಮಾಧ್ಯಮದಲ್ಲಿ ಪ್ರಸಾರವಾಗ್ತಿದ್ದಂತೆ ಎಚ್ಚೆತ್ತುಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಶುರುಮಾಡಿದ್ದಾರೆ. ಬಾಲಕಿಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಆದ್ರೆ ವೈದ್ಯಕೀಯ ಪರೀಕ್ಷೆ ವರದಿ ನೋಡಿ ವೈದ್ಯರು, ಪೊಲೀಸರು ದಂಗಾಗಿದ್ದಾರೆ. ಪರೀಕ್ಷೆ ವೇಳೆ 12 ವರ್ಷದ ಬಾಲಕಿ 4 ತಿಂಗಳ ಗರ್ಭಿಣಿ ಎಂಬ ವಿಷ್ಯ ಗೊತ್ತಾಗಿದೆ.

ಬಾಲಕಿಯನ್ನು ಭೋಪಾಲ್ ನ ಸುಲ್ತಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗ್ತಿದೆ. ಸಹೋದರನನ್ನು ಹುಡುಕುತ್ತ ಬಾಲಕಿ ಜಬಲ್ಪುರದಿಂದ ಭೋಪಾಲ್ ಗೆ ಬಂದಿದ್ದಳು ಎನ್ನಲಾಗಿದೆ. ಸಹೋದರನ ನಿರೀಕ್ಷೆಯಲ್ಲಿ ರೈಲ್ವೆ ನಿಲ್ದಾಣದಲ್ಲಿಯೇ ಬಾಲಕಿ ಮಲಗುತ್ತಿದ್ದಳು ಎನ್ನಲಾಗಿದೆ. ಆಕೆ ಮೇಲೆ ಪಾಪಿಗಳ ಕಣ್ಣು ಬಿದ್ದಿದೆ. ಚಾಕೋಲೇಟ್ ನೀಡುವ ನೆಪದಲ್ಲಿ ನಾಲ್ಕು ತಿಂಗಳಿಂದ ಆಕೆ ಮೇಲೆ ನಿರಂತರವಾಗಿ ಸಾಮೂಹಿಕ ಅತ್ಯಾಚಾರ ನಡೆಯುತ್ತಿದೆ ಎನ್ನಲಾಗಿದೆ. ಆದ್ರೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದ ಬಾಲಕಿ ಪೊಲೀಸ್ ಮುಂದೆ ಕಣ್ಣೀರಿಟ್ಟಿದ್ದಾಳೆ.

ಪ್ರತಿದಿನ ಹೊಟ್ಟೆ ನೋವಾಗ್ತಿತ್ತು. ಯಾಕೆಂದು ಗೊತ್ತಿರಲಿಲ್ಲ. ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿದ್ದಂತೆ ಏನಾದ್ರೂ ತಿನ್ನುತ್ತಿದ್ದೆ ಎಂದಿದ್ದಾಳೆ ಮುಗ್ದ ಬಾಲಕಿ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...