alex Certify
ಕನ್ನಡ ದುನಿಯಾ       Mobile App
       

Kannada Duniya

ದೇವಾಲಯದಲ್ಲಿ ನಡೀತು ನಡೆಯಬಾರದಂಥ ಕೃತ್ಯ

ಮಧ್ಯಪ್ರದೇಶದಲ್ಲಿ ದೇವಸ್ಥಾನದೊಳಗೆ ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ತನ್ನ ಪ್ರಿಯಕರನನ್ನು ಭೇಟಿಯಾಗಲು ಯುವತಿ ಪಟ್ಲವಾಡ್ ಗ್ರಾಮಕ್ಕೆ ಬಂದಿದ್ಲು. ಕಲ್ಲು ಗಣಿ ಬಳಿಯಿದ್ದ ದೇವಸ್ಥಾನದ ಸಮೀಪ ನಿಂತಿದ್ಲು.

ಅಲ್ಲಿಗೆ ಬಂದ ಕಾಮುಕನೊಬ್ಬ ಇಲ್ಯಾಕೆ ಒಬ್ಬಳೇ ನಿಂತಿದ್ದೀಯಾ ಅಂತಾ ಯುವತಿಯನ್ನು ಪ್ರಶ್ನಿಸಿದ್ದಾನೆ. ಇಲ್ಲಿ ಸೇಫ್ಟಿ ಇಲ್ಲ, ದೇವಸ್ಥಾನದೊಳಕ್ಕೆ ಹೋಗು ಎಂದಿದ್ದಾನೆ. ಅವನ ದುಷ್ಟ ಆಲೋಚನೆಯ ಅರಿವಿಲ್ಲದ ವಿದ್ಯಾರ್ಥಿನಿ ದೇವಾಲಯದೊಳಕ್ಕೆ ತೆರಳಿದ್ಲು.

ಕೂಡಲೇ ಇನ್ನಿಬ್ಬರು ಸಹಚರರಿಗೆ ಕಣ್ಸನ್ನೆ ಮಾಡಿ ಕರೆದ ಕಾಮುಕ, ಅವರು ಬರ್ತಿದ್ದಂತೆ ದೇವಸ್ಥಾನದ ಬಾಗಿಲು ಬಂದ್ ಮಾಡಿದ್ದಾನೆ. ಮೂವರೂ ಯುವತಿ ಮೇಲೆ ಅತ್ಯಾಚಾರ ಮಾಡಿ, ಅಲ್ಲಿಂದ ಪರಾರಿಯಾಗಿದ್ದಾರೆ. ಪ್ರಿಯಕರನ ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ, ಸ್ನೇಹಿತೆಗೆ ಕರೆ ಮಾಡಿ ಯುವತಿ ಪೊಲೀಸರನ್ನು ಬರಹೇಳಿದ್ಲು.

ಆರೋಪಿಗಳಾದ ಸಂಜಯ್ ಪಟೇಲ್, ಅಖಿಲೇಶ್ ಪಟೇಲ್ ಹಾಗೂ ಮಹಾದೇವ್ ಪಾಟಿದಾರ್ ನನ್ನು ಪೊಲೀಸರು ಈಗಾಗ್ಲೇ ಬಂಧಿಸಿದ್ದಾರೆ. ನಿರ್ಮಾಣ ಹಂತದಲ್ಲಿರುವ ಶಿವನ ದೇವಾಲಯದಲ್ಲಿ ಈ ಕೃತ್ಯ ನಡೆದಿದೆ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...