alex Certify
ಕನ್ನಡ ದುನಿಯಾ       Mobile App
       

Kannada Duniya

ದೂರು ನೀಡಲು ಬಂದ ರೇಪ್ ಸಂತ್ರಸ್ಥೆ ಮೇಲೆ ಠಾಣೆಯಲ್ಲೇ ಅತ್ಯಾಚಾರ

ದೂರು ನೀಡಲು ಪೊಲೀಸ್ ಠಾಣೆಗೆ ಬಂದಿದ್ದ ಸಾಮೂಹಿಕ ಅತ್ಯಾಚಾರ ಸಂತ್ರಸ್ಥೆ ಮೇಲೆ ಪೊಲೀಸರು ಕೂಡ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. 17 ವರ್ಷದ ಹುಡುಗಿಯನ್ನು ಪೆಟ್ರೋಲಿಂಗ್ ಟೀಮ್ ಪೊಲೀಸ್ ಠಾಣೆಗೆ ಕರೆತಂದಿತ್ತು. ಠಾಣೆಯಲ್ಲೇ ಅವಳ ಮೇಲೆ ಪೊಲೀಸನೊಬ್ಬ ಅತ್ಯಾಚಾರ ಮಾಡಿದ್ದಾನೆ.

ಮ್ಯಾಂಗೋ ಪೊಲೀಸ್ ಸ್ಟೇಶನ್ ನಲ್ಲಿ ಈ ಕೃತ್ಯ ನಡೆದಿದೆ. ಸಾಮೂಹಿಕ ಅತ್ಯಾಚಾರದಿಂದ ನೊಂದಿದ್ದ ಆಕೆ ಮೊದಲು ದೂರು ಕೊಡಲು ಹಿಂಜರಿದಿದ್ಲು. ಆದ್ರೆ ಪೊಲೀಸರಿಂದ ರಕ್ಷಣೆ, ನ್ಯಾಯ ಸಿಗಬಹುದು ಅನ್ನೋ ನಿರೀಕ್ಷೆಯಲ್ಲಿ ಧೈರ್ಯ ಮಾಡಿ ಠಾಣೆಗೆ ಬಂದಿದ್ಲು.

ಜನವರಿ 18ರಂದು ಪೊಲೀಸ್ ಠಾಣೆಯಲ್ಲೇ ಮತ್ತೊಮ್ಮೆ ದೌರ್ಜನ್ಯಕ್ಕೆ ತುತ್ತಾಗಿದ್ದಾಳೆ. ರಕ್ಷಕನಾಗಬೇಕಿದ್ದ ಪೊಲೀಸ್ ಭಕ್ಷಕನಾಗಿಬಿಟ್ಟಿದ್ದಾನೆ. ಈ ಬಗ್ಗೆ ತನಿಖೆ ನಡೆಸುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...