alex Certify
ಕನ್ನಡ ದುನಿಯಾ       Mobile App
       

Kannada Duniya

5 ವರ್ಷದ ಮಗಳ ಮುಂದೆ ನಡೀತು ಗರ್ಭಿಣಿ ಸಾಮೂಹಿಕ ಅತ್ಯಾಚಾರ

ಉತ್ತರ ಪ್ರದೇಶದಲ್ಲಿ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಮಿತಿಮೀರುತ್ತಿದೆ. ಐದು ವರ್ಷದ ಮಗುವಿನ ಮುಂದೆ ಗರ್ಭಿಣಿ ತಾಯಿಯ ಸಾಮೂಹಿಕ ಅತ್ಯಾಚಾರ ನಡೆದಿದೆ. ರಕ್ಷಣೆ ಮಾಡುವಂತೆ ಗರ್ಭಿಣಿ ಕೂಗಿಕೊಳ್ಳುತ್ತಿದ್ದರೆ ಅತ್ಯಾಚಾರಿಗಳು ಮಾತ್ರ ತಲೆ ಕೆಡಿಸಿಕೊಂಡಿಲ್ಲ. ಮಹಿಳೆ ಕೂಗು ಕೇಳಿ ಸ್ಥಳೀಯರು 100 ಕ್ಕೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಮೇಥಿಯ ಮೋಹನ್ಗಂಜ್ ನಿವಾಸಿ ಗರ್ಭಿಣಿ ತನ್ನ 5 ವರ್ಷದ ಮಗುವಿನ ಜೊತೆ ಚಿಕಿತ್ಸೆ ಪಡೆದುಕೊಂಡು ಬರೇಲಿಯಿಂದ ವಾಪಸ್ ಬರ್ತಿದ್ದಳು. ಮನೆಗೆ ಹೋಗಲು ಆಟೋ ಹತ್ತಿದ್ದಾಳೆ. ಸ್ವಲ್ಪ ದೂರ ಬಂದ ನಂತ್ರ ಇನ್ನೂ 3 ಮಂದಿ ಆಟೋ ಹತ್ತಿದ್ದಾರೆ. ಎಲ್ಲರೂ ಸೇರಿ ಮಹಿಳೆಯನ್ನು ಒತ್ತಾಯಪೂರ್ವಕವಾಗಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ.

ರಸ್ತೆ ಬದಿಯಲ್ಲಿ ಬಾಲಕಿ ಅಳುತ್ತಿರುವುದನ್ನು ನೋಡಿದ ಸ್ಥಳೀಯರು 100 ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಪೊಲೀಸರು ಬರುವ ವೇಳೆಗೆ ಆರೋಪಿಗಳು ಪರಾರಿಯಾಗಿದ್ದರು ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...