alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಜಿ ಪತ್ನಿ ಖಾಸಗಿ ಅಂಗಕ್ಕೆ ರಾಡ್ ಹಾಕಿದ ಪಾಪಿ

ಜಾರ್ಖಂಡನ ಜಮ್ತಾರ್ ಜಿಲ್ಲೆಯಲ್ಲಿ ಪಾಪಿಯೊಬ್ಬ ತನ್ನ ಇಬ್ಬರು ಸ್ನೇಹಿತರ ಜೊತೆ ಸೇರಿ ಮಾಜಿ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾನೆ. ನಂತ್ರ ಪತ್ನಿಯ ಖಾಸಗಿ ಅಂಗಕ್ಕೆ ರಾಡ್ ಹಾಕಿದ್ದಾನೆ. ಘಟನೆ ನಂತ್ರ ಮಹಿಳೆ ಸಾವನ್ನಪ್ಪಿದ್ದಾಳೆ.

ಘಟನೆ ಉದಯಪುರದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಬಗ್ಗೆ ಮಾಹಿತಿ ಸಿಗ್ತಿದ್ದಂತೆ ಪೊಲೀಸರು ಆರೋಪಿ ಉದಯ್ ನನ್ನು ಬಂಧಿಸಿದ್ದಾರೆ. ಅತ್ಯಾಚಾರವೆಸಗಿದ ಇನ್ನಿಬ್ಬರು ಸ್ನೇಹಿತರ ಹುಡುಕಾಟ ನಡೆಯುತ್ತಿದೆ. ಮಹಿಳೆ ಕಾಳಿ ಪೂಜೆ ವೇಳೆ ನಡೆಯುವ ಯಾತ್ರೆ ನೋಡಲು ಹೋಗಿದ್ದಳು ಎನ್ನಲಾಗಿದೆ.

ಅಲ್ಲಿಗೆ ಬಂದಿದ್ದ ಆಕೆಯನ್ನು ಮಾಜಿ ಪತಿ ತನ್ನ ಸ್ನೇಹಿತರ ಜೊತೆ ಸೇರಿ ಸಮೀಪದ ತೋಟಕ್ಕೆ ಎತ್ತುಕೊಂಡು ಹೋಗಿದ್ದಾರೆ. ಅಲ್ಲಿ ಅತ್ಯಾಚಾರವೆಸಗಿದ್ದಾರೆ. ನಂತ್ರ ಖಾಸಗಿ ಅಂಗಕ್ಕೆ ರಾಡ್ ಹಾಕಿದ್ದಾರೆ. ಮಹಿಳೆ ರಾತ್ರಿಯಿಡಿ ನರಳಿದ್ದಾಳೆ. ಬೆಳಿಗ್ಗೆ ಆಕೆ ನರಳುವ ಧ್ವನಿ ಕೇಳಿ ಅಲ್ಲಿಗೆ ಬಂದ ಸ್ಥಳೀಯರು ಪೊಲೀಸರಿಗೆ ದೂರು ನೀಡಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...