alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಮೂಹಿಕ ಅತ್ಯಾಚಾರವೆಸಗಿ 100 ಅಡಿ ಆಳಕ್ಕೆಸೆದ್ರು

ಐವರು ವಿದ್ಯಾರ್ಥಿಗಳು 11ನೇ ತರಗತಿಯಲ್ಲಿ ಓದುತ್ತಿರುವ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಘಟನೆ ಬೆಳಕಿಗೆ ಬಂದಿದೆ. ಅತ್ಯಾಚಾರವೆಸಗಿದ ಪಾಪಿಗಳು ವಿದ್ಯಾರ್ಥಿನಿಯನ್ನು 100 ಅಡಿ ಕೆಳಗೆ ಎಸೆದಿದ್ದಾರೆ. ಸುಮಾರು 40 ಗಂಟೆಗಳ ಕಾಲ ನೋವಿನಿಂದ ನರಳಿದ ವಿದ್ಯಾರ್ಥಿನಿ ಕೊನೆಗೂ ಬದುಕಿ ಬಂದಿದ್ದಾಳೆ.

ಪೀಡಿತೆಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆ ರಾಜಸ್ತಾನದ ಜುಂಜುನುನ್ ಜಿಲ್ಲೆಯ ಖೇತಡಿಯಲ್ಲಿ ನಡೆದಿದೆ. ಪೀಡಿತೆ ವಿದ್ಯಾರ್ಥಿ ಸಹಪಾಠಿಗಳಿಬ್ಬರು ಜನವರಿ 27 ರಂದು ರಾತ್ರಿ ವಿದ್ಯಾರ್ಥಿನಿಯನ್ನು ಮನೆಯಿಂದ ಹೊರಗೆ ಕರೆದಿದ್ದಾರೆ. ನಂತ್ರ ಆಕೆಯನ್ನು ಅಪಹರಿಸಿದ್ದಾರೆ. ಸಾಮೂಹಿಕ ಅತ್ಯಾಚಾರದ ನಂತ್ರ ಆಕೆಯನ್ನು ಆಳಕ್ಕೆಸೆದಿದ್ದಾರೆ.

ವಿದ್ಯಾರ್ಥಿನಿಗೆ ಪ್ರಜ್ಞೆ ಬರ್ತಿದ್ದಂತೆ ಕೂಗಿಕೊಂಡಿದ್ದಾಳೆ. ಇದು ಸ್ಥಳೀಯರೊಬ್ಬರಿಗೆ ಕೇಳಿದೆ. ಉಳಿದವರ ಸಹಾಯ ಪಡೆದು ವಿದ್ಯಾರ್ಥಿನಿಯನ್ನು ರಕ್ಷಿಸಿದ್ದಾರೆ. ವಿದ್ಯಾರ್ಥಿನಿ ಪಾಲಕರು ಕೂಡ ಆಕೆ ಕಾಣೆಯಾಗಿದ್ದಾಳೆಂದು ದೂರು ನೀಡಿದ್ದರು ಎನ್ನಲಾಗಿದೆ. ವಿದ್ಯಾರ್ಥಿನಿ ಸ್ಥಿತಿ ಗಂಭೀರವಾಗಿರುವುದ್ರಿಂದ ಹೆಚ್ಚಿನ ಮಾಹಿತಿ ಪಡೆಯಲು ಸಾಧ್ಯವಾಗಲಿಲ್ಲ ಎಂದು ಪೊಲೀಸ್ ಮೂಲಗಳು ಹೇಳಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...