alex Certify
ಕನ್ನಡ ದುನಿಯಾ       Mobile App
       

Kannada Duniya

ಚಲಿಸುತ್ತಿದ್ದ ಕಾರಿನಲ್ಲಿ ಇಬ್ಬರು ಯುವಕರಿಂದ ಹೇಯ ಕೃತ್ಯ

ರಾಷ್ಟ್ರೀಯ ಹೆದ್ದಾರಿ 58ರಲ್ಲಿ ದುಷ್ಕೃತ್ಯ ನಡೆದಿದೆ. ಚಲಿಸುತ್ತಿದ್ದ ಕಾರ್ ನಲ್ಲಿ ಇಬ್ಬರು ಯುವಕರು ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾರೆ. ಮಗುವಿನ ಜೊತೆ ಮಹಿಳೆಯನ್ನೂ ಹೈವೇ ಬಳಿ ಎಸೆದು ಹೋಗಿದ್ದಾರೆ.

ಮುಜಾಫರ್ನಗರ ನಿವಾಸಿ ಮಹಿಳೆಗೆ ಹರಿದ್ವಾರದ ವ್ಯಕ್ತಿಯೊಬ್ಬ ನೌಕರಿ ಕೊಡಿಸುವುದಾಗಿ ನಂಬಿಸಿದ್ದ. ಹೈವೇ ಬಳಿ ಸಿಗುವಂತೆ ಹೇಳಿದ್ದ. ಹೈವೇ ಬಳಿ ಇಬ್ಬರು ಯುವಕರು ಮಹಿಳೆಗೆ ಕಾಯ್ತಿದ್ದರು ಎನ್ನಲಾಗಿದೆ. ಮಹಿಳೆಗೆ ಮಧ್ಯೆ ಜ್ಯೂಸ್ ಕುಡಿಸಿದ್ದಾರೆ. ಅದಕ್ಕೆ ನಶೆ ಬರುವ ಮದ್ದು ಹಾಕಿದ್ದರು ಎನ್ನಲಾಗಿದೆ.

ಆರೋಪಿಗಳು ಕಾರಿನಲ್ಲಿ ಕುಳಿತುಕೊಳ್ಳುವಂತೆ ಮಹಿಳೆಗೆ ಹೇಳಿದ್ದಾರೆ. ಸ್ವಲ್ಪ ದೂರ ಹೋಗ್ತಿದ್ದಂತೆ ಮಹಿಳೆ ಮಗನನ್ನು ಕಾರಿನಿಂದ ಕೆಳಗೆ ಎಸೆದಿದ್ದಾರೆ. ಗಾಯಗೊಂಡಿರುವ ಮಗುವನ್ನು ಗ್ರಾಮಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿಗಳಿಬ್ಬರು ಚಲಿಸುತ್ತಿದ್ದ ಕಾರಿನಲ್ಲಿಯೇ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾರೆ. ನಂತ್ರ ಆಕೆಯನ್ನೂ ಕಾರಿನಿಂದ ಕೆಳಗೆಸೆದಿದ್ದಾರೆ.

ಪ್ರಜ್ಞೆ ಬರ್ತಿದ್ದಂತೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆ ಕಾರ್ಯ ಶುರು ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...