alex Certify
ಕನ್ನಡ ದುನಿಯಾ       Mobile App
       

Kannada Duniya

ವಿದೇಶಿ ಯುವತಿಯರ ಕಳ್ಳತನದ ಪರಿ ಕೇಳಿದ್ರೆ ಶಾಕ್ ಆಗ್ತೀರಿ

romanian robbersರುಮೇನಿಯಾದ ನಾಲ್ವರು ಯುವತಿಯರು ಹಾಗೂ ಮೂವರು ಪುರುಷರು ಮಾಡುತ್ತಿದ್ದ ಕಳ್ಳತನ ಪ್ರಕರಣ ಬಹಿರಂಗವಾಗಿದ್ದು, 7 ಮಂದಿಯನ್ನು ಈಗ ಪೋಲಿಸರು ಬಂಧಿಸಿದ್ದಾರೆ. ಜುಲೈ 17 ರಂದು ದೆಹಲಿಯ ಜವಾಹರ್ ಕಾಲೋನಿಯ ನಿವಾಸಿ ಗುಲ್ಶನ್ ತನೇಜಾ ಎಂಬುವರು ದೂರು ನೀಡಿದ್ದು, ತಮ್ಮ ಅಂಗಡಿಗೆ ವ್ಯಾಪಾರಕ್ಕೆಂದು ಬಂದಿದ್ದ ಕೆಲ ವಿದೇಶಿಯರು ಬಳಿಕ ಅಲ್ಮೇರಾದಲ್ಲಿದ್ದ ಸುಮಾರು 40,000 ರೂ. ಗಳನ್ನು ಕಳವು ಮಾಡಿದ್ದಾರೆಂದು ಹೇಳಿದ್ದರು.

ಸನಿಹದ ಸಿ.ಸಿ. ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದ ಪೊಲೀಸರು, ಐಷಾರಾಮಿ SUV ಕಾರಿನಲ್ಲಿ ವಿದೇಶಿಯರು ಬಂದಿಳಿದಿದ್ದನ್ನು ಗುರುತಿಸಿದ್ದರು. ಬಳಿಕ ಟ್ರಾವೆಲ್ ಏಜೆನ್ಸಿ ಮೂಲಕ ಅವರುಗಳು ತಂಗಿದ್ದ ಹೋಟೆಲ್ ನ ಮಾಹಿತಿ ಪಡೆದ ಪೊಲೀಸರು, ದಾಳಿ ನಡೆಸಿ ಅವರುಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ಇವರ ಕಳ್ಳತನದ ಕೃತ್ಯ ಬಯಲಾಗಿದೆ.

ಗುಲ್ಶನ್ ತನೇಜಾರ ಅಂಗಡಿಯಲ್ಲಿ 2,500 ರೂ. ಮೌಲ್ಯದ ಬಟ್ಟೆ ಖರೀದಿಸಿದ್ದ ಇವರುಗಳು, ಈ ಹಣವನ್ನು 10 ರೂ. ನೋಟುಗಳಲ್ಲಿ ನೀಡಿದ್ದರು. ಇದನ್ನು ಅಂಗಡಿ ಮಾಲೀಕ ಎಣಿಸುತ್ತಿದ್ದ ವೇಳೆ ತಂಡದ ಸದಸ್ಯನೊಬ್ಬ ಅಲ್ಮೇರಾದ ಬಾಗಿಲು ತೆರೆದು 40,000 ರೂ. ಗಳನ್ನು ಎಗರಿಸಿದ್ದ. ತಾವು ವಿದೇಶಿಯರಾಗಿರುವ ಕಾರಣ ಯಾರಿಗೂ ಅನುಮಾನ ಬರುವುದಿಲ್ಲ ಹಾಗೂ ಸಿಕ್ಕಿ ಬೀಳುವುದಿಲ್ಲ ಎಂಬ ಧೈರ್ಯದಿಂದ ಈ ತಂಡ ರಾಜಸ್ಥಾನದಲ್ಲಿಯೂ ಇದೇ ರೀತಿ ಕಳ್ಳತನ ಮಾಡಿದೆ ಹೇಳಲಾಗಿದೆ. ಇದೀಗ ಇವರ ಬಂಧನವಾಗುತ್ತಿದ್ದಂತೆಯೇ ರಾಜಸ್ಥಾನ ಪೊಲೀಸರು ವಿಚಾರಣೆಗೆಂದು ದೆಹಲಿಗೆ ಆಗಮಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...