alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ಬುಕ್ ಪ್ರೀತಿ ನಂಬಿ ಮೋಸ ಹೋದ ಪೇದೆ ಮಾಡಿದ್ದೇನು?

ಫೇಸ್ಬುಕ್ ನಲ್ಲಿ ಎಷ್ಟೋ ಮಂದಿ, ಹುಡುಗಿಯ ಹೆಸರಲ್ಲಿ ಅಕೌಂಟ್ ತೆರೆದು ಅದರಿಂದ ಚಾಟ್ ಮಾಡಿ ಮಜಾ ತೆಗೆದುಕೊಳ್ತಾರೆ. ಅದೇ ರೀತಿ ಚೆನ್ನೈನ ಪೊಲೀಸ್ ಪೇದೆಯೊಬ್ಬ ಹುಡುಗಿ ಅಂದ್ಕೊಂಡು ಫೇಸ್ಬುಕ್ ನಲ್ಲಿ ಚಾಟ್ ಮಾಡ್ತಾ ಹುಡುಗನನ್ನು ಪ್ರೀತಿಸಿಬಿಟ್ಟಿದ್ದ. ಆದ್ರೆ ತನಗಾಗಿರೋ ಮೋಸದ ಅರಿವಾಗುತ್ತಿದ್ದಂತೆ ಆ ಯುವಕನನ್ನು ಪೇದೆ ಕೊಲೆ ಮಾಡಿದ್ದಾನೆ.

32 ವರ್ಷದ ಪೊಲೀಸ್ ಪೇದೆ ಕಣ್ಣನ್ ಕುಮಾರ್ ಪೊಂಗಲ್ ಗಾಗಿ 10 ದಿನ ರಜಾ ತೆಗೆದುಕೊಂಡಿದ್ದ. ಫೇಸ್ಬುಕ್ ನಲ್ಲಿ ಆತ ಹುಡುಗಿಯೆಂದು ನಂಬಿ ಪ್ರೀತಿಸಿದ್ದ ಯುವಕನ ಮನೆ ಕೂಡ ಪೇದೆಯ ಊರಿನಿಂದ 5 ಕಿಮೀ ದೂರದಲ್ಲಿತ್ತು. ತಾನು ಪ್ರೀತಿಸಿದವಳನ್ನು ಭೇಟಿಯಾಗೋಣ ಎಂದುಕೊಂಡು ಪುದುಪಟ್ಟಿ ಎಂಬಲ್ಲಿಗೆ ಬಂದಿದ್ದ.

ಆದ್ರೆ ಎಸ್.ಅಯ್ಯನರ್ ಎಂಬ ಹೆಸರಿನ ಯುವಕ ತನಗೆ ಮೋಸ ಮಾಡಿದ್ದಾನೆ ಅನ್ನೋದು ಗೊತ್ತಾಗ್ತಿದ್ದಂತೆ ಪೇದೆ ಕಣ್ಣನ್ ಕೆರಳಿಬಿಟ್ಟಿದ್ದ. ಸ್ನೇಹಿತರಾದ ವಿಜಯ್ ಕುಮಾರ್, ತಮಿಳರಸನ್ ಜೊತೆ ಸೇರಿ ಯುವಕನನ್ನು ಕೊಲೆ ಮಾಡಿದ್ದಾನೆ. ಟೀಚರ್ ಟ್ರೈನಿಂಗ್ ಪಡೆಯುತ್ತಿದ್ದ ಅಯ್ಯನರ್ ನಕಲಿ ಫೇಸ್ಬುಕ್ ಖಾತೆ ತೆರೆದಿದ್ದ.

ಮೊದಲು ಅಯ್ಯನರ್ ಹಾಗೂ ಪೇದೆ ಕಣ್ಣನ್ ಆನ್ ಲೈನ್ ಚಾಟಿಂಗ್ ಮಾಡುತ್ತಿದ್ರು. ಇಬ್ಬರೂ ಫೋನ್ ನಲ್ಲಿ ಕೂಡ ಮಾತನಾಡಿದ್ದಾರೆ. ಅಯ್ಯನರ್ ಹುಡುಗಿಯಂತೆ ಧ್ವನಿ ಬದಲಾಯಿಸಿ ಮಾತನಾಡಿದ್ದರಿಂದ ಆತ ಯುವತಿ ಅಂತಾನೇ ಪೇದೆ ನಂಬಿಕೊಂಡಿದ್ದ. ಸದ್ಯ ಪೇದೆಯ ಸ್ನೇಹಿತರು ಸಿಕ್ಕಿಬಿದ್ದಿದ್ದು, ಆತ ಮಾತ್ರ ತಲೆಮರೆಸಿಕೊಂಡಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...