alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ ಬುಕ್ ಬಳಸುವವರು ಇದನ್ನು ಓದಲೇಬೇಕು !

Screen-Shot-2013-12-31-at-4.25.36-PM1

ಸಾಮಾಜಿಕ ಜಾಲ ತಾಣಗಳು ಇಂದು ಪ್ರತಿಯೊಬ್ಬರ ಜೀವನ ಸಂಗಾತಿಯಾಗಿದೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ಇಂತಹ ಜಾಲತಾಣಗಳೇ ಕೆಲವೊಮ್ಮೆ ನಮ್ಮ ಜೀವನವನ್ನೇ ಹಾಳು ಮಾಡಬಲ್ಲದು. ಅರೇ, ಅದೇಗೆ ಅಂತೀರಾ..? ಈ ಸ್ಟೋರಿ ಓದಿ.

ಹೌದು. ನೋಯ್ಡಾದಲ್ಲಿ ಈ ಘಟನೆ ನಡೆದಿದ್ದು, ಫೇಸ್‌ ಬುಕ್‌ ‌‌ನಲ್ಲಿ ವಿವಾಹಿತ ಮಹಿಳೆಯೋರ್ವಳನ್ನು ಪರಿಚಯ ಮಾಡಿಕೊಂಡ ದೀಪಕ್ ಎಂಬ ಯುವಕ ಆಕೆಯ ಜತೆ ಚಾಟಿಂಗ್ ನಡೆಸಿದ್ದಾನೆ. ಹಲವು ದಿನಗಳ ಈ ಪರಿಚಯದಿಂದ ಇಬ್ಬರೂ ಭೇಟಿಯಾಗುವ ನಿರ್ಧಾರಕ್ಕೆ ಬಂದಿದ್ದು, ಅದರಂತೆ ಲಾಡ್ಜ್ ಒಂದರಲ್ಲಿ ಇಬ್ಬರೂ ಭೇಟಿಯಾಗಿದ್ದಾರೆ.

ಈ ಸಮಯದಲ್ಲಿ ಆತ ತಾನು ನಿನ್ನನ್ನು ಮನಸಾರೆ ಪ್ರೀತಿಸುತ್ತಿರುವುದಾಗಿ ತಿಳಿಸಿದ್ದು, ಹಾಸಿಗೆ ಹಂಚಿಕೊಳ್ಳಲು ಬಲವಂತ ಮಾಡಿದ್ದಾನೆ. ಈತನ ಮತ್ತೊಂದು ಮುಖ ಅನಾವರಣಗೊಳ್ಳುತ್ತಲೇ ಆಕೆ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಇದರಿಂದ ಆಕ್ರೋಶಗೊಂಡ ಕಾಮುಕ ದೀಪಕ್, ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ.

ಈಗಾಗಲೇ ಘಟನೆಯ ಕುರಿತಾಗಿ ಸಂತ್ರಸ್ಥ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾಮುಕ ದೀಪಕ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...