alex Certify
ಕನ್ನಡ ದುನಿಯಾ       Mobile App
       

Kannada Duniya

ನಿಗೂಢವಾಗಿ ಸಾವನ್ನಪ್ಪಿದ ಫ್ರೆಂಚ್ ನಾಗರಿಕ

ಶಿಮ್ಲಾ: ಹಿಮಾಚಲ ಪ್ರದೇಶದ ಕುಲುವಿನ ಮನಾಲಿ ಹೋಟೆಲ್‌ನಲ್ಲಿ ಫ್ರೆಂಚ್‌ ನಾಗರಿಕ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಹೋಟೆಲ್‌ ಕಿಟಕಿಯಿಂದ ಕೆಳಕ್ಕೆ ಬಿದ್ದು, ಫ್ರೆಂಚ್‌ ನಾಗರಿಕ ಅಲೆಕ್ಸಿಸ್ ಪಿಂಗುಯೆಟ್‌(45) ಮೃತಪಟ್ಟಿದ್ದಾನೆ. ಆದರೆ ಘಟನೆ ಆತ್ಮಹತ್ಯೆಯೋ, ಅಪಘಾತವೋ ಅಥವಾ ಕೊಲೆಯೋ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.

ಹೋಟೆಲ್‌ ಕಿಟಕಿಯಿಂದ ಕೆಳಕ್ಕೆ ಬಿದ್ದಿದ್ದಾರೆ. ಈ ವೇಳೆ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ತಲೆಗೆ ತೀವ್ರ ಪೆಟ್ಟಾಗಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ತಲುಪುವ ಮುನ್ನವೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಆ.25ರಿಂದ ಅಲೆಕ್ಸಿಸ್ ತನ್ನ ಸ್ನೇಹಿತ ಮಾರ್ಟೇಲ್‌ ಪೆಂಗ್ನಿಸ್‌ನ ಜತೆ ತಂಗಿದ್ದಾರೆ. ಟೂರಿಸ್ಟ್‌ ವೀಸಾದಲ್ಲಿ ಭಾರತಕ್ಕೆ ಆಗಮಿಸಿದ್ದರು. ಅಲೆಕ್ಸಿಸ್‌ನ ಸಾವಿನ ಕುರಿತು ಫ್ರೆಂಚ್‌ ರಾಯಭಾರಿ ಕಚೇರಿ ಮೂಲಕ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ. ಪ್ರಕರಣದ ವಿಚಾರಣೆ ಮುಗಿಯುವವರೆಗೆ ಸ್ನೇಹಿತ ಮಾರ್ಟೇಲ್‌ ಪೆಂಗ್ನಿಸ್‌ ಮನಾಲಿ ಬಿಟ್ಟು ಬೇರೆ ಭಾಗಕ್ಕೆ ತೆರಳದಂತೆ ಸೂಚಿಸಲಾಗಿದೆ ಎಂದು ಕುಲು ಎಸ್‌ಪಿ ಶಾಲಿನಿ ಅಗ್ನಿಹೋತ್ರಿ ತಿಳಿಸಿದ್ದಾರೆ.

ಕುಟುಂಬ ಸದಸ್ಯರ ವಿಚಾರಣೆ, ಹೇಳಿಕೆ ಪಡೆದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಆ.12 ರಿಂದ ಅ.10 ರ ವರೆಗಿನ ಟೂರಿಸ್ಟ್‌ ವೀಸಾದಲ್ಲಿ ಅವರು ಭಾರತಕ್ಕೆ ಆಗಮಿಸಿದ್ದರು ಎಂದು ಶಾಲಿನಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...