alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಜಿ ಸಚಿವೆ ಸಂಗೀತಾ ಯಾದವ್ ಗೆ ಬೆಂಕಿ ಹಚ್ಚಿದ್ರು ಗಂಡನ ಮನೆಯವರು

ಸಮಾಜವಾದಿ ಪಕ್ಷದ ರಾಜ್ಯ ಸಚಿವೆಯಾಗಿದ್ದ ಸಂಗೀತಾ ಯಾದವ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಮಾಜಿ ಸಚಿವೆಯನ್ನು ಜೀವಂತವಾಗಿ ಸುಟ್ಟು ಹಾಕುವ ಪ್ರಯತ್ನ ನಡೆದಿದೆ. ಭಾನುವಾರ ರಾತ್ರಿ ಘಟನೆ ನಡೆದಿದೆ.

ಬಿಹಾರ ಗಾಯಕಿ ಹಾಗೂ ಲಲಿತ ಕಲಾ ಅಕಾಡೆಮಿ ಮಾಜಿ ಉಪಕುಲಪತಿ ಸಂಗೀತಾ ಯಾದವ್ ರನ್ನು ಜೀವಂತವಾಗಿ ಸುಡುವ ಯತ್ನ ನಡೆದಿದೆ. ಶೇಕಡಾ 10 ರಷ್ಟು ಸುಟ್ಟಿರುವ ಅವ್ರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಸಂಗೀತಾ, ವರದಕ್ಷಿಣೆ ಕಿರುಕುಳದ ಆರೋಪ ಹೊರಿಸಿದ್ದಾರೆ. ಪತಿ ಪಿತೂರಿ ಮಾಡಿದ್ದು ಮಾವ ಬೆಂಕಿ ಹಚ್ಚಿದ್ದಾರೆಂದು ಸಂಗೀತಾ ದೂರಿದ್ದಾರೆ.

ಸಂಗೀತಾ ಪತಿ, ಅತ್ತೆ, ಮಾವನ ವಿರುದ್ಧ ದೂರು ದಾಖಲಾಗಿದೆ. ಮಾವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನವೆಂಬರ್ 2016 ರಂದು ಬಾದ್ಲಾಪುರ್ ದ ಜಯಂತ್ ಯಾದವ್ ಮಗ ಇಂಜಿನಿಯರ್ ದುರ್ಗೇಶ್ ಯಾದವ್ ಜೊತೆ ಸಂಗೀತಾ ಮದುವೆ ನಡೆದಿತ್ತು. ದುರ್ಗೇಶ್ ದಕ್ಷಿಣ ಭಾರತದಲ್ಲಿ ಕೆಲಸ ಮಾಡ್ತಿದ್ದಾನಂತೆ.

ಸಂಗೀತಾ ಲಕ್ನೋದಲ್ಲಿ ವಾಸವಾಗಿದ್ದಾರೆ. ಶನಿವಾರ ಮಾವನ ಮನೆಗೆ ಬಂದಿದ್ದರಂತೆ. ರಾತ್ರಿ ಮಲಗಿದ್ದಾಗ ಅತ್ತೆ-ಮಾವ ಪೆಟ್ರೋಲ್ ಸುರಿದು ಹತ್ಯೆಗೆ ಯತ್ನ ನಡೆಸಿದ್ದರಂತೆ. ಆದ್ರೆ ಅತ್ತೆ-ಮಾವ ಇದನ್ನು ಅಲ್ಲಗಳೆದಿದ್ದಾರೆ. ಹಣಕ್ಕೆ ಬೇಡಿಕೆ ಇಡುತ್ತಿದ್ದ ಸಂಗೀತಾ ಕಾರ್ಯಕರ್ತರ ಜೊತೆ ಬಂದು ಡ್ರಾಮಾ ಮಾಡಿದ್ದಾರಂತೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...