alex Certify
ಕನ್ನಡ ದುನಿಯಾ       Mobile App
       

Kannada Duniya

ಅಪಾರ್ಟ್ಮೆಂಟ್ ನಲ್ಲೇ ಕೊಲೆಯಾಗಿದ್ದಾನೆ ಯುವ ಬಾಕ್ಸರ್

ದೆಹಲಿ ಮೂಲದ ಮಾಜಿ ಬಾಕ್ಸರ್ ಜಿತೇಂದ್ರ ಮನ್ ಎಂಬಾತ ಗ್ರೇಟರ್ ನೊಯ್ಡಾದ ಫ್ಲಾಟ್ ನಲ್ಲಿ ಶವವಾಗಿದ್ದಾನೆ. ಆತನ ದೇಹದ ಮೇಲೆ ಬುಲೆಟ್ ನಿಂದಾದ ಗಾಯಗಳು ಪತ್ತೆಯಾಗಿವೆ. 27ರ ಹರೆಯದ ಬಾಕ್ಸರ್, ಉಜ್ಬೇಕಿಸ್ತಾನ, ರಷ್ಯಾ, ಫ್ರಾನ್ಸ್ ನಲ್ಲಿ ನಡೆದ ಚಾಂಪಿಯನ್ಷಿಪ್ ಗಳಲ್ಲಿ ಸ್ಪರ್ಧಿಸಿದ್ದ.

ಜಿತೇಂದ್ರ ಮನ್ ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದ. ಜನವರಿ 10ರಂದು ಬೆಳಗ್ಗೆ ಜಿಮ್ ಗೆ ಹೊರಟಿದ್ದ. ನಂತರ ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಸ್ನೇಹಿತ ಪ್ರೀತಮ್ ಆತನನ್ನು ಸಂಪರ್ಕಿಸಲು ಪ್ರಯತ್ನಿಸಿದ್ರೂ ಸಾಧ್ಯವಾಗಲಿಲ್ಲ.

ಜಿತೇಂದ್ರನ ಅಪಾರ್ಟ್ಮೆಂಟ್ ಕೀಲಿ ಪ್ರೀತಂ ಬಳಿಯೂ ಇತ್ತು. ನಂತರ ಆತ ಅಪಾರ್ಟ್ಮೆಂಟ್ ಬಾಗಿಲು ತೆರೆದು ನೋಡಿದ್ದಾನೆ. ಜಿತೇಂದ್ರ ರಕ್ತದ ಮಡುವಿನಲ್ಲಿ ಬಿದ್ದಿದ್ದ, ಬುಲೆಟ್ ಗಳು ಆತನ ದೇಹ ಹೊಕ್ಕಿದ್ದವು. ನಾಲ್ಕು ತಿಂಗಳ ಹಿಂದಷ್ಟೆ ಆತ ಈ ಅಪಾರ್ಟ್ಮೆಂಟ್ ಗೆ ಶಿಫ್ಟ್ ಆಗಿದ್ದ.

ಯಾರೋ ಆತನನ್ನು ಹತ್ಯೆ ಮಾಡಿ ನೀಟಾಗಿ ಬಾಗಿಲು ಲಾಕ್ ಮಾಡಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಜಿತೇಂದ್ರನ ಮೊಬೈಲ್ ಅನ್ನು ಕೂಡ ಹಂತಕ ಕೊಂಡೊಯ್ದಿದ್ದಾನೆ. ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...