alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ನೇಹಿತನೇ ಮಾಡಿದ್ದಾನೆ ಬಿಜೆಪಿ ಮಾಜಿ ಶಾಸಕನ ಮಗನ ಕೊಲೆ

ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಶನಿವಾರ ಬಿಜೆಪಿ ಮಾಜಿ ಶಾಸಕ ಜಿಪ್ಪಿ ತಿವಾರಿ ಮಗ ವೈಭವ್ ತಿವಾರಿ ಹತ್ಯೆಗೈದವನ ಗುರುತು ಸಿಕ್ಕಿದೆ. ಪೊಲೀಸರು ಸಿಸಿ ಟಿವಿಯಲ್ಲಿ ಆರೋಪಿಯನ್ನು ಪತ್ತೆ ಹಚ್ಚಿದ್ದು, ಬಂಧನಕ್ಕೆ ಬಲೆ ಬೀಸಿದ್ದಾರೆ.

ಕೊಲೆಗೆ ಹಣಕಾಸಿನ ವ್ಯವಹಾರವೇ ಕಾರಣ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಕೊಲೆ ಆರೋಪಿ ವೈಭವ್ ಗೆ ಪರಿಚಿತನಾಗಿದ್ದಾನೆ. ಮೃತ ವೈಭವ್ ಜಿಪ್ಪಿ ತಿವಾರಿಯ ಏಕೈಕ ಪುತ್ರನಾಗಿದ್ದ. ವೈಭವ್ ಗೆ ಗುಂಡು ಹಾರಿಸಿ ಕೊಲೆ ಮಾಡಿರುವ ವಿಕ್ರಮ್ ಸಿಂಗ್ ಇತಿಹಾಸದ ಶಿಕ್ಷಕನಾಗಿದ್ದಾನೆ.

ವಿಕ್ರಮ್ ಸಿಂಗ್ ಜೊತೆ ವೈಭವ್ ಸ್ನೇಹಿತ ಹಾಗೂ ಪ್ರಾಪರ್ಟಿ ಡೀಲರ್ ಸೂರಜ್ ಕೈವಾಡವೂ ಇದೆ ಎಂದು ಪೊಲೀಸರು ಹೇಳಿದ್ದಾರೆ. ವೈಭವ್ ಅಹಮದಾಬಾದ್ ನ ಐಐಎಂನಲ್ಲಿ ಎಂಬಿಎ ಮುಗಿಸಿದ್ದ. ಪ್ರಾಪರ್ಟಿ ಡೀಲರ್ ಕೆಲಸ ಮಾಡ್ತಿದ್ದ. ಆರೋಪಿ ಸೂರಜ್, ವೈಭವ್ ಜೊತೆ ವ್ಯವಹಾರ ಮಾಡ್ತಿದ್ದ. ಮೂರು ವರ್ಷಗಳ ಹಿಂದೆ ಇಬ್ಬರೂ ಪ್ರತ್ಯೇಕವಾಗಿ ಬ್ಯುಸಿನೆಸ್ ಶುರುಮಾಡಿದ್ದರು.

ಘಟನೆ ನಡೆಯುವ ದಿನ ಸೂರಜ್ ವೈಭವ್ ಗೆ ಕರೆ ಮಾಡಿ ಹಜರತ್ ಗಂಜ್ ಗೆ ಬರುವಂತೆ ಹೇಳಿದ್ದ ಎನ್ನಲಾಗಿದೆ. ಆದ್ರೆ ವೈಭವ್ ಅಲ್ಲಿಗೆ ಹೋಗಿರಲಿಲ್ಲ. ವೈಭವ್ ಇದ್ದಲ್ಲಿಗೆ ಬಂದ ಸೂರಜ್ ಗಲಾಟೆ ಶುರುಮಾಡಿದ್ದಾನೆ. ಈ ಮಧ್ಯೆ ಸೂರಜ್ ಜೊತೆ ಬಂದಿದ್ದ ವಿಕ್ರಮ್ ವೈಭವ್ ಗೆ ಗುಂಡು ಹಾರಿಸಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...