alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಸಕನ ಜೊತೆ ಸೆಕ್ಸ್ ಗೆ ಒತ್ತಡ; ಐವರು ಅರೆಸ್ಟ್

crime-arrest

ಶಾಸಕನೊಂದಿಗೆ ಸೆಕ್ಸ್ ಮಾಡಲು ಬಾಲಕಿಯೊಬ್ಬಳಿಗೆ ಒತ್ತಡ ಹಾಕಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿತ ಶಾಸಕನನ್ನು ಕೂಡ ಬಂಧಿಸಲಾಗುವುದು ಎಂದು ನಳಂದ ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಬಿಹಾರದ ನವಾಡದ ಆರ್.ಜೆ.ಡಿ. ಶಾಸಕ ರಾಜವಲ್ಲಭ್ ಯಾದವ್ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಆರೋಪಕ್ಕೆ ಗುರಿಯಾಗಿದ್ದರಿಂದ ಈ ಹಿಂದೆಯೇ ಆರ್.ಜೆ.ಡಿ. ಪಕ್ಷದಿಂದ ಅವರನ್ನು ಅಮಾನತು ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿ ನೀಡಿದ ಹೇಳಿಕೆ ಆಧರಿಸಿ ಕ್ರಮಕೈಗೊಂಡಿರುವ ನಳಂದಾ ಜಿಲ್ಲಾ ಪೊಲೀಸರು ಹಿಲ್ಸಾ ಪೊಲೀಸ್ ಠಾಣೆ ವ್ಯಾಪ್ತಿಯ ಖಡ್ಗಿ ಗ್ರಾಮದಲ್ಲಿ ಐವರನ್ನು ಬಂಧಿಸಿದ್ದಾರೆ. ಮೊದಲಿಗೆ ಪ್ರಕರಣದಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದರಿಂದ ನಳಂದ ಎಸ್.ಪಿ.ಯನ್ನು ವರ್ಗಾವಣೆ ಮಾಡಿ ಬೇರೆಯವರನ್ನು ನಿಯೋಜಿಸಲಾಗಿತ್ತು.

ಇದೀಗ ಪ್ರಕರಣದ ತನಿಖೆ ಚುರುಕಾಗಿದ್ದು, ಬಾಲಕಿ ಮೇಲೆ ಒತ್ತಡ ಹಾಕಿದ್ದ ಸುಲೇಖಾದೇವಿ, ಆಕೆಯ ತಾಯಿ, ಮಗಳು, ಸಹೋದರಿ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಶಾಸಕನಿಗೆ ಸ್ಥಳೀಯ ನ್ಯಾಯಾಲಯ ಜಾಮೀನು ನಿರಾಕರಿಸಿದ್ದು, ಅವರನ್ನೂ ಕೂಡ ಬಂಧಿಸಲಾಗುವುದು ಎಂದು ನೂತನ ಎಸ್.ಪಿ. ಕುಮಾರ್ ಆಶೀಶ್ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...