alex Certify
ಕನ್ನಡ ದುನಿಯಾ       Mobile App
       

Kannada Duniya

ಅಶ್ಲೀಲ ಚಿತ್ರ ವೀಕ್ಷಿಸಿ ಅತ್ಯಾಚಾರವೆಸಗಿದ ಅಪ್ರಾಪ್ತರು

ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿದ ಐವರು ಅಪ್ರಾಪ್ತ ಹುಡುಗರು, 8 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಡೆಹರಾಡೂನ್‌ನ ಸಾಹಸ್‌ಪುರ್‌ನಲ್ಲಿ ನಡೆದಿದೆ.

9 ರಿಂದ 14 ವರ್ಷದೊಳಗಿನ ಐವರು ಮಕ್ಕಳನ್ನು ಪೊಲೀಸರು ಬಂಧಿಸಿದ್ದಾರೆ. ಜು.12 ರಂದು ಬಾಲಕಿ ಆಟವಾಡುತ್ತಿರುವ ವೇಳೆ ಚಾಕಲೇಟು ಕೊಟ್ಟು, 10 ವರ್ಷ ವಯಸ್ಸಿನ ಬಾಲಕನ ಮನೆಗೆ ಹುಡುಗಿಯನ್ನು ಕರೆದುಕೊಂಡು ಹೋಗಿದ್ದಾರೆ. ಒಬ್ಬ ಬಾಗಿಲಲ್ಲಿ ಕಾವಲು ಕಾಯುತ್ತಿದ್ದರೆ, ಉಳಿದವರು ಬಾಲಕಿಯ ಮೇಲೆರಗಿದ್ದಾರೆ. ಮೊಬೈಲ್‌ ಫೋನ್‌ ನಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿದ ಬಳಿಕ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳೆಲ್ಲರೂ ಕಾರ್ಮಿಕ ಕುಟುಂಬದ ಮಕ್ಕಳಾಗಿದ್ದು, 6 ರಿಂದ 9ನೇ ತರಗತಿಯವರು. ಬಾಲಕಿ 5ನೇ ತರಗತಿಯಲ್ಲಿ ಓದುತ್ತಿದ್ದು, ಕುಟುಂಬದೊಂದಿಗೆ ವಾಸವಿದ್ದಾಳೆ. ಬಾಲಕಿ ಪೋಷಕರು ಕೆಲಸದ ನಿಮಿತ್ತ ಹೊರ ಹೋಗಿರುವ ವೇಳೆ, ಆರೋಪಿಗಳು ಚಾಕಲೇಟು ಆಸೆ ತೋರಿಸಿ, ಅವರಲ್ಲೇ ಒಬ್ಬನ ಮನೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ಸಾಹಸ್‌ಪುರ ಠಾಣೆಯ ಅಧಿಕಾರಿ ನರೇಂದ್ರ ರಾಥೋರ್‌ ವಿವರಿಸಿದ್ದಾರೆ.

ಅತ್ಯಾಚಾರ ನಡೆಸಿದ ಮನೆಯಲ್ಲಿನ ಪಾಲಕರು ಕೆಲಸದ ಕಾರಣ ಮನೆಯಲ್ಲಿರಲಿಲ್ಲ. ಇದೇ ವೇಳೆ ಆ ಆರೋಪಿಯ ಸಹೋದರ ಮನೆಗೆ ಬಂದಿದ್ದರಿಂದ ಬಾಲಕಿಯನ್ನು ಆಕೆಯ ಮನೆಗೆ ಕಳುಹಿಸಿದ್ದಾರೆ. ಮನೆಗೆ ಬಂದ ಬಾಲಕಿ ಮಂಕಾಗಿದ್ದು, ನಡತೆಯಲ್ಲೂ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ತಾಯಿ ವಿಚಾರಿಸಿದ್ದಾರೆ. ಈ ವೇಳೆ ನಡೆದ ಘಟನೆಯನ್ನು ಬಾಲಕಿ ಹೇಳಿದ್ದಾರೆ. ಬಾಲಕಿಯ ಪೋಷಕರ ದೂರಿನ ಆಧಾರದಲ್ಲಿ ಐವರನ್ನು ಬಂಧಿಸಲಾಗಿದೆ ಎಂದು ರಾಥೋರ್‌ ತಿಳಿಸಿದರು.

ಕಾನ್ಪುರದಲ್ಲಿಯೂ ಇಂತಹುದೇ ಘಟನೆ ಬೆಳಕಿಗೆ ಬಂದಿದ್ದು, ಅಶ್ಲೀಲ ಚಿತ್ರಗಳನ್ನು ಇಂಟರ್‌ನೆಟ್‌ನಲ್ಲಿ ನಿಷೇಧಿಸುವುದಕ್ಕೆ ತಾಂತ್ರಿಕ ಅಡಚಣೆಗಳಿವೆ. ಇದನ್ನು ಸರಿಪಡಿಸಿದಲ್ಲಿ ಮಾತ್ರ ಇಂತಹ ಕೃತ್ಯಗಳ ನಿಯಂತ್ರಣ ಸಾಧ್ಯ. ದೈಹಿಕ ವಿಚಾರಗಳಿಗೆ ಸಂಬಂಧಪಟ್ಟದ್ದನ್ನು ಶಿಕ್ಷಣದ ಒಂದು ಭಾಗವಾಗಿ ಮಾಡಿದಲ್ಲಿ ಇಂತಹ ಮಕ್ಕಳಿಗೆ ತಿಳುವಳಿಕೆ ಮೂಡಲು ಸಾಧ್ಯವಾಗುತ್ತದೆ ಎಂದು ಹೊಸದಿಲ್ಲಿಯ ಡಾ. ರಾಮ್‌ ಮನೋಹರ್ ಲೋಹಿಯಾ ಆಸ್ಪತ್ರೆಯ ಮನಃಶಾಸ್ತ್ರ ವಿಭಾಗದ ಡಾ. ಸ್ಮಿತಾ ದೇಶ್‌ಪಾಂಡೆ ಅಭಿಪ್ರಾಯಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...