alex Certify
ಕನ್ನಡ ದುನಿಯಾ       Mobile App
       

Kannada Duniya

ಮೊದಲ ರಾತ್ರಿ ಗಂಡನ ಬದಲು ಬಂದ ಅಪರಿಚಿತ ವ್ಯಕ್ತಿ..!

ಮದುವೆಯಾದ ಮೊದಲ ರಾತ್ರಿ ವಧು ಅತ್ಯಾಚಾರಕ್ಕೊಳಗಾದ ಪ್ರಕರಣವೊಂದು ಮೀರತ್ ನಲ್ಲಿ ಬೆಳಕಿಗೆ ಬಂದಿದೆ. ತವರಿಗೆ ಬಂದ ಮಹಿಳೆ ತನ್ನ ನೋವು ತೋಡಿಕೊಂಡಿದ್ದಾಳೆ. ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ನಾಲ್ಕು ದಿನಗಳ ಹಿಂದೆ ಪೀಡಿತೆಯ ಮದುವೆಯಾಗಿತ್ತಂತೆ. ಮದುವೆಯಾದ ಮೊದಲ ರಾತ್ರಿ ಕೋಣೆಗೆ ಪತಿ ಬರುವ ಬದಲು ಅಪರಿಚಿತ ವ್ಯಕ್ತಿ ಬಂದಿದ್ದಾನಂತೆ. ಮಹಿಳೆ ಮೇಲೆ ದುಷ್ಕೃತ್ಯವೆಸಗಿದ್ದಾನಂತೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ರೆ ಕೊಲೆ ಮಾಡುವುದಾಗಿ ಬೆದರಿಸಿದ್ದಾನಂತೆ.

ಪೀಡಿತ ಮಹಿಳೆ ಪ್ರಕಾರ ಆಕೆಯನ್ನು ಮೂರು ದಿನಗಳ ಕಾಲ ಕೋಣೆಯಿಂದ ಹೊರ ಬಿಡಲಿಲ್ಲವಂತೆ. ಈ ಬಗ್ಗೆ ಗಂಡನ ಮನೆಯವರಿಗೆ ಹೇಳಿದ್ರೆ ಅವ್ರು ಬೆದರಿಸಿದ್ದಲ್ಲದೆ ಮನೆಯಿಂದ ಹೊರ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರಂತೆ. ಪೀಡಿತೆ ಗಂಡನ ಮನೆಯಿಂದ ತಪ್ಪಿಸಿಕೊಂಡು ಬಂದಿದ್ದು ಪೊಲೀಸರಿಗೆ ದೂರು ನೀಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...