alex Certify
ಕನ್ನಡ ದುನಿಯಾ       Mobile App
       

Kannada Duniya

ಮೊದಲ ರಾತ್ರಿ ಪತ್ನಿಯ ಆ ಮಾತು ಕೇಳಿ ಕಂಗಾಲಾದ ಪತಿ

suhagraat

ಸಂಬಂಧಗಳಿಗೆ ಈಗ ಬೆಲೆ ಇಲ್ಲ. ಪತಿ ಅಥವಾ ಪತ್ನಿ ಸಂಬಂಧ ಒಂದು ವರ್ಷ ಗಟ್ಟಿಯಾಗಿರುವುದೇ ಕಷ್ಟ. ಮೊದಲ ರಾತ್ರಿಯೇ ಸಂಬಂಧ ಮುರಿದು ಬೀಳುವುದುಂಟು. ಉತ್ತರ ಪ್ರದೇಶದ ಅಲಹಾಬಾದ್ ನಲ್ಲಿ ಮೊದಲ ರಾತ್ರಿಯ ಕನಸು ಕಂಡಿದ್ದ ವರನಿಗೆ ಶಾಕ್ ಕಾದಿತ್ತು. ವಧು ಬಾಯಿಯಿಂದ ಬಂದ ಈ ಮಾತು ತಲೆಸುತ್ತು ಬರುವಂತೆ ಮಾಡಿತ್ತು.

ಒಂದು ವರ್ಷದ ಹಿಂದೆ ಈ ಮದುವೆ ನಡೆದಿತ್ತು. ಮೊದಲ ದಿನ ರಾತ್ರಿ ವಧು, ಗಂಡನ ಬಳಿ ಬಂದು ತಾನು 2 ತಿಂಗಳ ಗರ್ಭಿಣಿ. ನನಗೆ ಬಲವಂತ ಮಾಡಿ ಮದುವೆ ಮಾಡಲಾಗಿದೆ ಎಂದಿದ್ದಾಳೆ. ಇದರಿಂದ ತಬ್ಬಿಬ್ಬಾದ ವರ ಮನೆಯವರಿಗೆ ತಿಳಿಸಿದ್ದಾನೆ.  ಕುಟುಂಬಸ್ಥರು ಮಾತುಕತೆ ನಡೆಸಿ, ಹುಡುಗಿಗೆ ಗರ್ಭಪಾತ ಮಾಡಿಸಿದ್ದಾರೆ.

ಕಥೆ ಅಲ್ಲಿಗೆ ಮುಗಿಯಲಿಲ್ಲ. ಈಗ ಮನೆಗೊಂದು ಮಗು ಬಂದಿದೆ. ಆದ್ರೆ ಗಂಡ ಮಾತ್ರ ಇದು ನನ್ನ ಮಗುವಲ್ಲ ಎನ್ನುತ್ತಿದ್ದಾನೆ. ಹೆಂಡತಿ ತನಗೆ ಮೋಸ ಮಾಡಿದ್ದಾಳೆ ಎಂಬುದು ಆತನ ವಾದ. ಇಷ್ಟರ ನಡುವೆ ಹೆಂಡತಿ ಪ್ರಿಯಕರ ಅಶ್ಲೀಲ ವಿಡಿಯೋವೊಂದನ್ನು ಮನೆಗೆ ಕಳುಹಿಸಿದ್ದಾನೆ. ಇದರಲ್ಲಿ ಅವರಿಬ್ಬರು ಒಂದಾಗಿರುವ ದೃಶ್ಯಗಳಿವೆ. ಜೊತೆಗೆ ಯುಟ್ಯೂಬ್ ಲಿಂಕ್ ಕೂಡ ಕಳುಹಿಸಿದ್ದಾರೆ. ಇದರಿಂದ ಬೇಸತ್ತಿರುವ ಪತಿ, ಪೊಲೀಸರಿಗೆ ದೂರು ನೀಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...