alex Certify
ಕನ್ನಡ ದುನಿಯಾ       Mobile App
       

Kannada Duniya

ಮೂವರ ಪ್ರಾಣಕ್ಕೆ ಎರವಾಯ್ತು ಪಾರ್ಕಿಂಗ್ ಗಲಾಟೆ

ಅಕ್ಕಪಕ್ಕದ ಮನೆಗಳಲ್ಲಿ ವಾಸಿಸುತ್ತಿದ್ದ ಸಹೋದರರಿಬ್ಬರ ನಡುವೆ ಪಾರ್ಕಿಂಗ್ ವಿಚಾರಕ್ಕೆ ನಡೆದ ಗಲಾಟೆ ಮೂವರ ಪ್ರಾಣಕ್ಕೆ ಎರವಾಗಿದೆ. ಘಟನೆ ನವದೆಹಲಿಯ ಮಾಡೆಲ್ ಟೌನ್ ನಲ್ಲಿ ನಡೆದಿದೆ.

ಗುರ್ಜಿತ್, ಆತನ ಹಿರಿಯ ಸಹೋದರ ಜಸ್ಪಾಲ್ ಹಾಗೂ ಜಸ್ಪಾಲ್ ಪತ್ನಿ ಸ್ವೀಟಿ ಸಾವನ್ನಪ್ಪಿದವರಾಗಿದ್ದು, ಉದ್ಯಮ ನಡೆಸುತ್ತಿದ್ದ ಸಹೋದರರ ನಡುವೆ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಿಂದಿನಿಂದಲೂ ಕಲಹ ನಡೆಯುತ್ತಿತ್ತೆಂದು ಹೇಳಲಾಗಿದೆ.

ಗುರುವಾರ ರಾತ್ರಿ 11-20 ರ ಸುಮಾರಿಗೆ ಪಾರ್ಕಿಂಗ್ ವಿಚಾರಕ್ಕೆ ಸಹೋದರರ ನಡುವೆ ಮತ್ತೆ ಕಲಹ ಶುರುವಾಗಿದೆ. ಈ ಸಂದರ್ಭದಲ್ಲಿ ಜಸ್ಪಾಲ್, ಗುರ್ಜಿತ್ ಮೇಲೆ ಕತ್ತಿಯಿಂದ ಹಲ್ಲೆ ಮಾಡಿದ್ದಾನೆ. ಇದರಿಂದಾಗಿ ಆತ ಕುಸಿದು ಬಿದ್ದಿದ್ದು, ಆಗ ಇಬ್ಬರು ಖಾಸಗಿ ಭದ್ರತಾ ಸಿಬ್ಬಂದಿ ಜಸ್ಪಾಲ್ ಹಾಗೂ ಆತನ ಪತ್ನಿ ಸ್ವೀಟಿ ಮೇಲೆ ಗುಂಡಿನ ದಾಳಿ ನಡೆಸಿದ್ದು, ಅವರುಗಳೂ ಸಾವನ್ನಪ್ಪಿದ್ದಾರೆ. ಮೂವರು ಸಾವಿಗೀಡಾಗುತ್ತಿದ್ದಂತೆಯೇ ಗುಂಡು ಹಾರಿಸಿದ ಭದ್ರತಾ ಸಿಬ್ಬಂದಿ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...