alex Certify
ಕನ್ನಡ ದುನಿಯಾ       Mobile App
       

Kannada Duniya

ಪಂಚತಾರಾ ಹೋಟೆಲ್ ನಲ್ಲಿ ಗನ್ ಫೈಟ್..!

chennai-gunಚೆನ್ನೈನ ಫೈವ್ ಸ್ಟಾರ್ ಹೋಟೆಲ್ ಒಂದ್ರಲ್ಲಿ ವ್ಯಕ್ತಿಯೊಬ್ಬ ಗನ್ ತೋರಿಸಿ ಗ್ರಾಹಕನಿಗೆ ಬೆದರಿಸಿದ ಘಟನೆ ನಡೆದಿದೆ. ನುಂಗಬಾಕ್ಕಮ್ ನಲ್ಲಿರೋ ಫೈವ್ ಸ್ಟಾರ್ ಹೋಟೆಲ್ ಬಾರ್ ಒಂದ್ರಲ್ಲಿ 48 ವರ್ಷದ ಹರಿಕೃಷ್ಣನ್ ಎಂಬಾತ್ ಬಿಲ್ ಪಾವತಿಸಲು ಕೌಂಟರ್ ಬಳಿ ನಿಂತಿದ್ದ.

ಈ ವೇಳೆ ವ್ಯಕ್ತಿಯೊಬ್ಬ ಹರಿಕೃಷ್ಣನ್ ನನ್ನು ತಳ್ಳಿದ್ದಾನೆ, ದೂರ ನಿಲ್ಲು ಎಂದಿದ್ದಕ್ಕೆ ಜಗಳ ಶುರು ಮಾಡಿದ್ದಾನೆ. ಬಾರ್ ಸಿಬ್ಬಂದಿ ಮಧ್ಯಪ್ರವೇಶಿಸಿ ಜಗಳ ಬಿಡಿಸಿದ್ದಾರೆ, ಆತ ಬಾರ್ ನಿಂದ ಹೊರನಡೆದಿದ್ದಾನೆ. ಬಳಿಕ ಮನೆಗೆ ಹೊರಟ ಹರಿಕೃಷ್ಣನ್ ಗಾಡಿ ತೆಗೆದುಕೊಳ್ಳಲು ಹೋಟೆಲ್ ಪಾರ್ಕಿಂಗ್ ಏರಿಯಾಗೆ ಬಂದಿದ್ದ.

ಅಲ್ಲೂ ಪ್ರತ್ಯಕ್ಷನಾದ ಆ ವ್ಯಕ್ತಿ ಗನ್ ತೋರಿಸಿ ಶೂಟ್ ಮಾಡಿ ಕೊಲ್ಲುವುದಾಗಿ ಬೆದರಿಸಿದ್ದಾನೆ. ಕೂಡಲೇ 100 ಗೆ ಕರೆ ಮಾಡಿದ ಹರಿಕೃಷ್ಣನ್ ರಕ್ಷಣೆ ಕೋರಿದ್ದಾನೆ. ಪೊಲೀಸರು ಬರುವಷ್ಟರಲ್ಲಿ ಬೆದರಿಸಿದ ವ್ಯಕ್ತಿ ಕಾರ್ ನಲ್ಲಿ ಎಸ್ಕೇಪ್ ಆಗಿದ್ದ. ಆತ ಪರಾರಿಯಾದ ಕಾರ್ ಕೂಡ ಕದ್ದಿದ್ದು ಅಂತಾ ಪೊಲೀಸರು ತಿಳಿಸಿದ್ದಾರೆ. ಸದ್ಯ ಸಿಸಿ ಟಿವಿ ಫುಟೇಜ್ ಪರಿಶೀಲಿಸ್ತಾ ಇರೋ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...