alex Certify
ಕನ್ನಡ ದುನಿಯಾ       Mobile App
       

Kannada Duniya

ಪೋಲಿ ಯುವಕನಿಂದ ಮಗಳ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ತಂದೆ

fatherಬೆನ್ನು ಬಿದ್ದಿದ್ದ ಪೋಲಿ ಯುವಕನಿಂದ ಮಗಳನ್ನು ರಕ್ಷಿಸಲು ಹೋಗಿದ್ದ ತಂದೆ ಆತ ಗುದ್ದಿದ ರಭಸಕ್ಕೆ ಮೆದುಳು ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ.

ಲಿಬಿಯಾದಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದ 25 ವರ್ಷದ ಅವಿಷೇಕ್ ಭಟ್ಟಾಚಾರ್ಯ ಸುಮಾರು ಒಂದೂವರೆ ವರ್ಷಗಳಿಂದ ಸದಾಶಿವ್ ಕಾಂಚನ್ ಎಂಬುವವರ 18 ವರ್ಷದ ಮಗಳಿಗೆ ಕಾಟ ಕೊಡ್ತಿದ್ದ. ಆಕೆ ಫೋನ್ ನಂಬರ್ ಚೇಂಜ್ ಮಾಡಿದ ಮೇಲೂ ಅವಳ ವಿಳಾಸವನ್ನು ಪತ್ತೆ ಮಾಡಿ ಹುಡುಕಿಕೊಂಡು ಬರ್ತಿದ್ದ.

 

ಲಿಬಿಯಾದಿಂದ ಮುಂಬೈಗೆ ಮರಳಿದ ಅವಿಷೇಕ್, ಪ್ರತಿದಿನ ಅವಳನ್ನು ಹಿಂಬಾಲಿಸಿಕೊಂಡು ಮನೆವರೆಗೂ ಬರಲಾರಂಭಿಸಿದ್ದ. ನವೆಂಬರ್ 14ರಂದು ಅವಿಷೇಕ್ ಚಲನವಲನ ಗಮನಿಸಿದ್ದ ಸದಾಶಿವ, ಪೊಲೀಸರಿಗೆ ದೂರು ಕೊಡಲು ಮುಂದಾದ್ರು. ಅದಕ್ಕೂ ಮುನ್ನ ಒಮ್ಮೆ ಅವನನ್ನು ಮಾತಿನಲ್ಲಿ ಎಚ್ಚರಿಸೋಣ ಎಂದುಕೊಂಡು ಹೋಗಿದ್ರು.

ಬುದ್ಧಿ ಹೇಳಲು ಬಂದ ಸದಾಶಿವ ಅವರಿಗೆ ರಾಯಘಡ ಜಿಲ್ಲೆಯ ಪೋಯ್ನಾಡ್ ನಲ್ಲಿ ಅವಿಷೇಕ್ ಥಳಿಸಿದ್ದಾನೆ. ನಡುರಸ್ತೆಯಲ್ಲೇ ಅವರ ಮೇಲೆ ಹಲ್ಲೆ ಮಾಡಿದ್ದಾನೆ. ಸ್ಥಳದಲ್ಲೇ ಕುಸಿದುಬಿದ್ದ ಸದಾಶಿವ ಅವರಿಗೆ ಪ್ರಜ್ಞೆ ಮರಳಲೇ ಇಲ್ಲ. 4 ದಿನಗಳ ಬಳಿಕ ಅವರು ನವಿ ಮುಂಬೈನ ಅಪೋಲೋ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ತಂದೆಯ ಸಾವಿಗೆ ಕಾರಣನಾದ ಅವಿಷೇಕ್ ಗೆ ತಕ್ಕ ಶಿಕ್ಷೆಯಾಗಬೇಕೆಂದು ಯುವತಿ ಒತ್ತಾಯಿಸಿದ್ದಾಳೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...