alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಮೊಸ್ ಕೇಳಿದ ಮಗನಿಗೆ ತಂದೆ ಮಾಡಿದ್ದೇನು ಗೊತ್ತಾ?

ಮದ್ಯದ ನಶೆಯಲ್ಲಿ ವ್ಯಕ್ತಿಯೊಬ್ಬ ತನ್ನ 6 ವರ್ಷದ ಮಗನನ್ನು ಕಾಲುವೆಗೆ ಎಸೆದಿದ್ದಾನೆ. ಮಗನ ಹತ್ಯೆ ಆರೋಪದಡಿ ತಂದೆಯನ್ನು ಬಂಧಿಸಿ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ. ಘಟನೆ ದೆಹಲಿಯಲ್ಲಿ ನಡೆದಿದೆ.

ಮದ್ಯದ ನಶೆಯಲ್ಲಿದ್ದ ವ್ಯಕ್ತಿ ಮಗನ ಜೊತೆ ಕೆಲಸಕ್ಕೆ ಹೋಗ್ತಿದ್ದ ಎನ್ನಲಾಗಿದೆ. ರಸ್ತೆ ಮಧ್ಯೆ ಮಗ ಮೊಮೊಸ್ ನೀಡುವಂತೆ ಕೇಳಿದ್ದಾನೆ. ಮಗನ ಮೇಲೆ ಸಿಟ್ಟುಗೊಂಡ ತಂದೆ, ಮಗನನ್ನು ಕಾಲುವೆಗೆ ಎಸೆದಿದ್ದಾನೆ. ಇದನ್ನು ನೋಡಿದ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ದೂರು ನೀಡಿದ್ದಾರೆ.

ತಕ್ಷಣಕ್ಕೆ ಬಂದ ಪೊಲೀಸರು ಬಾಲಕನ ಹುಡುಕಾಟ ನಡೆಸಿದ್ದಾರೆ. 24 ಗಂಟೆ ನಂತ್ರ ಬಾಲಕನ ಶವ ಕಾಲುವೆಯಲ್ಲಿ ಸಿಕ್ಕಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. 2004ರಲ್ಲಿ ಮದುವೆಯಾಗಿದ್ದ ಆರೋಪಿಯನ್ನ 2012ರಲ್ಲಿ ಪತ್ನಿ ಬಿಟ್ಟು ಹೋಗಿದ್ದಾಳೆ. ಈತನಿಗೆ ಮೂರು ಮಕ್ಕಳಿದ್ದು, ಎಲ್ಲರೂ ಈತನ ಜೊತೆಗೇ ಇದ್ದರು ಎನ್ನಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...