alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಸಿಗೆಯಲ್ಲಿ ಮೂತ್ರ ಮಾಡಿದ ಬಾಲಕಿಗೆ ಇಷ್ಟು ದೊಡ್ಡ ಶಿಕ್ಷೆ…!

ಹೈದ್ರಾಬಾದ್ ನಲ್ಲಿ ಮನ ಕಲಕುವ ಘಟನೆಯೊಂದು ನಡೆದಿದೆ. ತಂದೆಯೊಬ್ಬ 8 ವರ್ಷದ ಬಾಲಕಿಗೆ ಬಿಸಿ ಚಮಚದಲ್ಲಿ ಸುಟ್ಟಿದ್ದಾನೆ. ಮಗು ಹಾಸಿಗೆಯಲ್ಲಿ ಮೂತ್ರ ಮಾಡಿಕೊಂಡಿದೆ ಎನ್ನುವ ಕಾರಣಕ್ಕೆ ತಂದೆ ಇಂಥ ಕೆಲಸ ಮಾಡಿದ್ದಾನೆ.

ಕ್ಯಾಬ್ ಚಾಲಕ ರಾಜು ಎಂಬಾತ ತನ್ನ ಮಗುವಿನ ದೇಹದ ಮೇಲೆ ಅಲ್ಲಲ್ಲಿ ಬಿಸಿ ಚಮಚ ಇಟ್ಟಿದ್ದಾನೆ. ಮಗುವಿನ ದೇಹದ ಅನೇಕ ಕಡೆ ಸುಟ್ಟ ಗಾಯವಿದೆ. ಎನ್ ಜಿ ಓ ಒಂದರ ದೂರಿನ ಮೇಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ಜನವರಿ 1ರಂದು ನಡೆದಿದೆ ಎನ್ನಲಾಗ್ತಿದೆ. ಸುಟ್ಟ ನೋವಿನಿಂದ ಅಳುತ್ತಿದ್ದ ಮಗುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗ್ಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಆರೋಪಿ ತಂದೆ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಎನ್ ಜಿ ಓ ಒತ್ತಾಯ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...