alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಾರಣಕ್ಕಾಗಿ ತನ್ನ 3 ಮಕ್ಕಳ ಕೊಲೆ ಮಾಡಿಸಿದ ತಂದೆ

ತಂದೆಯೊಬ್ಬ ತನ್ನ ಮೂರು ಮಕ್ಕಳ  ಕೊಲೆಗೆ ಕಾರಣನಾಗಿದ್ದಾನೆ. ಮಕ್ಕಳ ಚಿಕ್ಕಪ್ಪನೇ ಮುಗ್ದ ಮಕ್ಕಳಿಗೆ ಗುಂಡಿಟ್ಟು ಕೊಲೆ ಮಾಡಿದ್ದಾನೆ. ಘಟನೆಗೆ ಕಾರಣ ಕೇಳಿ ಪೊಲೀಸರೇ ದಂಗಾಗಿದ್ದಾರೆ.

ಘಟನೆ ನಡೆದಿರುವುದು ಹರಿಯಾಣಾದ ಕುರುಕ್ಷೇತ್ರದಲ್ಲಿ. ಮಂಗಳವಾರ ಮೂರು ಮಕ್ಕಳ ಶವ ಪಂಚಕುಲಾದ ಕಾಡಿನೊಳಗೆ ಸಿಕ್ಕಿವೆ. ಮೃತ ಮಕ್ಕಳು ಶೇರ್ಘಡ್ ನವರಾಗಿದ್ದು ಮೂರು ದಿನಗಳಿಂದ ನಾಪತ್ತೆಯಾಗಿದ್ದರು. ಸಮೀರ್, ಸಿಮರನ್ ಹಾಗೂ ಸಮರ್ ಮೃತ ಮಕ್ಕಳು.

ಮಕ್ಕಳನ್ನು ಕೊಲೆ ಮಾಡಿಸಿದ ಪಾಪಿ ತಂದೆ ಹೆಸರು ಸೋನಾ ಮಲ್ಲಿಕ್. ಮಕ್ಕಳಿಗೆ ಗುಂಡಿಕ್ಕಿ ಕೊಂದ ಚಿಕ್ಕಪ್ಪನ ಹೆಸರು ಜಗದೀಪ್. ಸದ್ಯ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಈ ಕೊಲೆಗೆ ಪ್ರೇಮ ಪ್ರಸಂಗ ಕಾರಣ ಎಂಬುದು ಗೊತ್ತಾಗಿದೆ. ಸೋನು ಹಿಮಾಚಲದ ಹುಡುಗಿಯನ್ನು ಪ್ರೀತಿ ಮಾಡ್ತಿದ್ದ ಎನ್ನಲಾಗಿದೆ. ಎರಡನೇ ಮದುವೆಯಾಗುವುದಾಗಿ ಮನೆಯಲ್ಲಿ ಹೇಳಿದ್ದ. ಆದರೆ ಇದಕ್ಕೆ ಒಪ್ಪಿಗೆ ಸಿಕ್ಕಿರಲಿಲ್ಲ.

ಒಂದು ಹೆಣ್ಣು ಮಗುವಿನ ತಾಯಿಯನ್ನು ಪ್ರೀತಿ ಮಾಡ್ತಿದ್ದ ಸೋನು ಆಗಾಗ ಆಕೆಯನ್ನು ಭೇಟಿ ಮಾಡ್ತಿದ್ದ ಎನ್ನಲಾಗಿದೆ. ಈ ಮಧ್ಯೆ ಮೂರು ದಿನಗಳ ಹಿಂದೆ ಆತನ ಮೂವರು ಮಕ್ಕಳು ಕಾಣೆಯಾಗಿವೆ. ರಾತ್ರಿಯಿಡಿ ಮಕ್ಕಳನ್ನು ಚಿಕ್ಕಪ್ಪ ಹುಡುಕುವ ನಾಟಕವಾಡಿದ್ದಾನೆ. ಮರುದಿನ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ವಿಚಾರಣೆ ನಡೆಸಿದಾಗ ತಂದೆ ಸೋನು ಹೇಳಿಕೆ ಮೇರೆಗೆ ಮಕ್ಕಳನ್ನು ಕೊಲೆ ಮಾಡಿರುವುದಾಗಿ ಚಿಕ್ಕಪ್ಪ ಒಪ್ಪಿಕೊಂಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...