alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೇಮಿ ಜೊತೆ ಮಗಳನ್ನು ನೋಡಿದ ತಂದೆ ಮಾಡ್ದ ಇಂಥ ಕೆಲಸ..!

ಬಿಹಾರದ ದರ್ಬಂಗ್ ನಲ್ಲಿ ಮರ್ಯಾದೆಗೆ ಅಂಜಿ ತಂದೆಯೊಬ್ಬ ತನ್ನ ಮಗಳನ್ನು ಕೊಲೆ ಮಾಡಿದ್ದಾನೆ. ಗೌಸಾಘಾಟ್ ನ ಹಳ್ಳಿಯೊಂದರ ನಿವಾಸಿ ರಾಜ್ಕುಮಾರ್ ಸಾಹ್ ತನ್ನ 20 ವರ್ಷದ ಮಗಳನ್ನು ಕೊಲೆ ಮಾಡಿದ್ದಾನೆ. ಬೇರೆ ಜಾತಿಯ ಯುವಕನ ಜೊತೆ ಮಗಳನ್ನು ನೋಡಿ ಆಕ್ರೋಶಗೊಂಡ ರಾಜ್ಕುಮಾರ್ ಕತ್ತು ಹಿಸುಕಿ ಮಗಳನ್ನು ಹತ್ಯೆ ಮಾಡಿದ್ದಾನೆ.

ಐದು ದಿನಗಳ ನಂತ್ರ ಮೃತ ರೀಟಾ ಚಿಕ್ಕಪ್ಪ ರೀಟಾ ನಾಪತ್ತೆಯಾಗಿದ್ದಾಳೆಂದು ಪೊಲೀಸರಿಗೆ ದೂರು ನೀಡಿದ್ದಾನೆ. ದೂರಿನ ಮೇಲೆ ವಿಚಾರಣೆ ಶುರುಮಾಡಿದ ಪೊಲೀಸರು ರೀಟಾ ತಂದೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ರಾಜ್ಕುಮಾರ್ ತಪ್ಪನ್ನು ಒಪ್ಪಿಕೊಂಡಿದ್ದಾನೆ.

ಅಕ್ಟೋಬರ್ 30ರಂದು ಮಗಳು ರೀಟಾಳನ್ನು ಪ್ರೇಮಿ ಜೊತೆ ನೋಡಬಾರದ ಸ್ಥಿತಿಯಲ್ಲಿ ನೋಡಿದ್ದಾನೆ ರಾಜ್ಕುಮಾರ. ಸಿಟ್ಟಿಗೆದ್ದು ಮಗಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತ್ರ ಹೆಣವನ್ನು ಮೂಟೆ ಕಟ್ಟಿ ನದಿಗೆ ಎಸೆದು ಬಂದಿದ್ದಾನೆ. ಮರು ದಿನ ಹೆಣ ಮೇಲೆ ಬಂದಿದ್ದರಿಂದ ಬಿದಿರಿನ ಸಹಾಯದಿಂದ ಮುಂದೆ ತಳ್ಳಿದ್ದನಂತೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...