alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳ ಶವದ ಜೊತೆ ತಂದೆ ಮಾಡಿದ ಕೆಲಸ ನೋಡಿ ದಂಗಾದ ಪೊಲೀಸ್…!

ತಂದೆಯೊಬ್ಬ 20 ವರ್ಷದ ಮಗಳ ಜೊತೆ ಮಾಡಿದ ಕೆಲಸ ನೋಡಿ ಪೊಲೀಸರೇ ದಂಗಾಗಿದ್ದಾರೆ. ಮಗಳನ್ನು ಹತ್ಯೆ ಮಾಡಿ ಶವವನ್ನು ಸುಟ್ಟು ಹಾಕಿದ್ದಾನೆ ತಂದೆ. ಘಟನೆ ಹರ್ಯಾಣದ ಬಹಾದೂರ್ ಗಡ್ ನಲ್ಲಿ ನಡೆದಿದೆ.

ತಂದೆ ಮಗಳ ಹತ್ಯೆ ಮಾಡಿ ಶವವನ್ನು ಸುಟ್ಟಿದ್ದಾನೆ. ಸಂಬಂಧಿಕರು ತಂದೆಗೆ ಬೆಂಬಲ ನೀಡಿದ್ದಾರೆ. ತಂದೆ ಹಾಗೂ ಸಂಬಂಧಿಕರ ವಿರುದ್ಧ ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬುಧವಾರ ಸಂಜೆ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದರು.

ಅಜಯ್ ತನ್ನ ಕೊನೆ ಮಗಳು, ಬಿಎ ಅಂತಿಮ ವರ್ಷದಲ್ಲಿ ಓದುತ್ತಿದ್ದ ಮಗಳನ್ನು ಹತ್ಯೆ ಮಾಡಿ ಶವವನ್ನು ಸುಡುತ್ತಿದ್ದಾನೆಂದು ಗ್ರಾಮಸ್ಥರು ದೂರು ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರಿಗೆ ಶವ ಸುಡುತ್ತಿರುವುದು ಕಾಣಿಸಿದೆ. ಸ್ಥಳದಲ್ಲಿದ್ದ ತಂದೆ ಹಾಗೂ ಸಂಬಂಧಿಕರನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ತಂದೆ ಸತ್ಯ ಬಾಯಿಬಿಟ್ಟಿದ್ದಾನೆ. ಮಗಳ ನಡವಳಿಕೆ ಮೇಲೆ ಸಂಶಯವಿತ್ತು. ಹಾಗಾಗಿ ಹೀಗೆ ಮಾಡಿದೆ ಎಂದಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...