alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳ ಕೊಲೆಗೈದು ಮನೆಯಲ್ಲಿ ಹೂಳಿದ್ದ ತಂದೆ

ಜಾರ್ಖಂಡ್ ನ ಜಮ್ಶೆಡ್ಪುರದ ಬಳಿಯಿರುವ ಕಪಾಲಿ ಟಿಓಪಿ ಕ್ಷೇತ್ರದಲ್ಲಿ ತಂದೆಯೊಬ್ಬ ತನ್ನ ಮಗಳನ್ನು ಹತ್ಯೆ ಮಾಡಿ ಮನೆಯಲ್ಲಿಯೇ ಹೂಳಿದ್ದ ಘಟನೆ ಬೆಳಕಿಗೆ ಬಂದಿದೆ. ಎರಡು ತಿಂಗಳ ಹಿಂದೆಯೇ ಪಾಪಿ ತಂದೆ ಮಗಳ ಹತ್ಯೆ ಗೈದಿದ್ದಾನೆ. ಆದ್ರೀಗ ಮೃತಳ ತಾಯಿಗೆ ಪತಿ ಮೇಲೆ ಶಂಕೆ ವ್ಯಕ್ತವಾಗಿದ್ದು, ಪೊಲೀಸರಿಗೆ ದೂರು ನೀಡಿದ್ದಾಳೆ.

ಮಹಿಳೆ ದೂರಿನ ಮೇಲೆ ಆರೋಪಿ ತಂದೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸತ್ಯ ಹೊರಬಿದ್ದಿದೆ. ಮೃತಳ ತಾಯಿ ಪ್ರಕಾರ, ಆಕೆ ಪತಿ ಮಗಳ ಮೇಲೆ ಅತ್ಯಾಚಾರವೆಸಗಿದ್ದನಂತೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಗಂಡ-ಹೆಂಡತಿ ಮಧ್ಯೆ ಗಲಾಟೆ ನಡೆದಿತ್ತಂತೆ. ತಂದೆ ಕುಡಿದ ನಶೆಯಲ್ಲಿ ಹೀಗೆ ಮಾಡಿದ್ದು ಆತನನ್ನು ಕ್ಷಮಿಸುವಂತೆ ಮಗಳು ಹೇಳಿದ್ದಳು ಎನ್ನಲಾಗಿದೆ.

ಪತಿ ಕೃತ್ಯಕ್ಕೆ ಕೋಪಗೊಂಡ ಪತ್ನಿ ತವರಿಗೆ ಹೋಗಿದ್ದಳಂತೆ. ಎರಡು ತಿಂಗಳ ನಂತ್ರ ವಾಪಸ್ ಬಂದಿದ್ದು, ಮಗಳೆಲ್ಲಿ ಎಂದು ಪ್ರಶ್ನೆ ಮಾಡಿದ್ದಾಳೆ. ಮಗಳನ್ನು ಹಾಸ್ಟೇಲ್ ನಲ್ಲಿಟ್ಟಿರುವುದಾಗಿ ಪತಿ ಸುಳ್ಳು ಹೇಳಿದ್ದಾನೆ. ಪತಿ ನಡವಳಿಕೆಯಿಂದ ಸಂಶಯಗೊಂಡ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾಳೆ. ಆರೋಪಿ ಈ ಹಿಂದೆ ತನ್ನ ಸಂಬಂಧಿ ಕೊಲೆ ಮಾಡಿ ಜೈಲು ಸೇರಿದ್ದ ಎನ್ನಲಾಗಿದೆ. ಕೆಲ ದಿನಗಳ ಹಿಂದಷ್ಟೇ ಆತ ವಾಪಸ್ ಬಂದಿದ್ದ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...