alex Certify
ಕನ್ನಡ ದುನಿಯಾ       Mobile App
       

Kannada Duniya

ಪುತ್ರಿಯ ಮೇಲೆ ಅತ್ಯಾಚಾರ ಎಸಗಿದ್ದ ಪಾಪಿ ಅರೆಸ್ಟ್

rape 1

ಲಖ್ನೋ: ಉತ್ತರಪ್ರದೇಶದಲ್ಲಿ ಪುತ್ರಿಯ ಮೇಲೆ, ನಿರಂತರ ಅತ್ಯಾಚಾರ ಎಸಗಿದ್ದ ಪಾಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಜಲೌನ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಭಾರೀ ಸುದ್ದಿಯಾಗಿತ್ತು. ಅಪ್ಪನ ನೀಚತನವನ್ನು ಪುತ್ರಿಯೇ ಬಯಲಿಗೆ ಎಳೆದಿದ್ದಳು.

18 ವರ್ಷದ ಮಗಳ ಮೇಲೆ ವಿಕೃತಕಾಮಿಯಾಗಿದ್ದ ತಂದೆ ಅತ್ಯಾಚಾರ ಎಸಗುತ್ತಿದ್ದ. ಈ ವಿಷಯವನ್ನು ತಾಯಿಗೆ ಹೇಳಿದ್ದರೂ, ಯಾವುದೇ ಪ್ರಯೋಜನವಾಗಿರಲಿಲ್ಲ. ಇದರಿಂದ ಏನು ಮಾಡಬೇಕೆಂದು ತೋಚದೇ ಸ್ನೇಹಿತರ ಬಳಿ ಅಳಲು ತೋಡಿಕೊಂಡಿದ್ದಳು. ಮನೆಯಲ್ಲಿ ಅಪ್ಪನಿಂದ ಅತ್ಯಾಚಾರ ನಡೆಯುವಾಗ, ಸ್ನೇಹಿತರ ಮೂಲಕ ವಿಡಿಯೋ ಮಾಡಿಸಿದ್ದಳು. ಅದನ್ನೇ ಆಧಾರವಾಗಿಟ್ಟುಕೊಂಡು, ಪೊಲೀಸರಿಗೆ ದೂರು ನೀಡಿದ್ದಳು. ಕೇಸು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಪೋಷಕರಿಂದಲೇ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆದರೆ ಹೇಗೆ ಎಂದು ಪ್ರಶ್ನಿಸಿದ ಯುವತಿ, ನನ್ನ ತಂದೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಂತಹ ಪಾಪಿ ತಂದೆ ಯಾರಿಗೂ ಸಿಗಬಾರದೆಂದು ಹೇಳಿದ್ದಾಳೆ. ಆರೋಪಿ ತಂದೆಯನ್ನು ಬಂಧಿಸಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...