alex Certify
ಕನ್ನಡ ದುನಿಯಾ       Mobile App
       

Kannada Duniya

ವಿದ್ಯಾರ್ಥಿನಿ ಕೊಲೆಗೆ ಹೊಸ ಟ್ವಿಸ್ಟ್: ಮೃತಳ ತಂದೆ ಅರೆಸ್ಟ್

ಲಕ್ನೋದಲ್ಲಿ ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿನಿ ಕೊಲೆಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ವಿದ್ಯಾರ್ಥಿನಿ ಕೊಲೆಯನ್ನು ಆಕೆಯ ತಂದೆ ರಾಕೇಶ್ ಮಾಡಿದ್ದಾನೆ ಎನ್ನಲಾಗ್ತಿದೆ. ಭಾನುವಾರ ಮೃತ ವಿದ್ಯಾರ್ಥಿನಿ ತಾಯಿ ಪೊಲೀಸ್ ಮುಂದೆ ಅನುಮಾನ ವ್ಯಕ್ತಪಡಿಸಿದ್ದಾಳೆ. ಮಗಳ ಕೊಲೆಗೆ ತಂದೆ ಕಾರಣ ಎಂದಿದ್ದಾಳೆ.

ಆರೋಪಿ ತಂದೆ ರಾಕೇಶ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಮೃತ ಮಾರ್ಟಿನಾ ಮದುವೆಗೆ ತಂದೆ ರಾಕೇಶ್ ಒತ್ತಾಯ ಮಾಡಿದ್ದ ಎನ್ನಲಾಗಿದೆ. ಆದ್ರೆ ಮಾರ್ಟಿನಾ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಳಂತೆ. ಇದ್ರಿಂದ ಕೋಪಗೊಂಡ ತಂದೆ, ಮಗಳ ಮೇಲೆ ಐದು ಗುಂಡು ಹಾರಿಸಿದ್ದಾನೆ.

ಕೊಲೆ ಶನಿವಾರ ಬೆಳಿಗ್ಗೆ 8 ಗಂಟೆಗೆ ನಡೆದಿದೆ. ಆದ್ರೆ ಒಂದೂವರೆ ಗಂಟೆ ನಂತ್ರ ಪೊಲೀಸರಿಗೆ ವಿಷ್ಯ ಗೊತ್ತಾಗಿದೆ. ಅಲ್ಲಿಯವರೆಗೆ ದಂಪತಿ ಏನು ಮಾಡುತ್ತಿದ್ದರು ಎಂಬ ಪ್ರಶ್ನೆ ಉದ್ಬವವಾಗಿದೆ. ಹಾಗೆ ಘಟನೆ ನಡೆದ 18 ಗಂಟೆ ನಂತ್ರ ಕೊಲೆ ಪತಿ ಮಾಡಿದ್ದೆಂದು ಪತ್ನಿ ನೀಡಿರುವ ಹೇಳಿಕೆ ಕೂಡ ಅನುಮಾನಕ್ಕೆ ಕಾರಣವಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕುವ ಯತ್ನದಲ್ಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...