alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ ಹತ್ಯೆ ಮಾಡಿ ಓಡ್ತಿದ್ದವ ಯಮಲೋಕ ಸೇರಿದ

मॉब लिंचिंगः पत्नी की हत्या कर भाग रहे युवक को भीड़ ने पकड़ा, पीट-पीटकर की हत्या

ಉತ್ತರ ಪ್ರದೇಶದ ಫತೇಪುರ್ ನಲ್ಲಿ ಅಪರಾಧ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪತ್ನಿ ಹತ್ಯೆ ಮಾಡಿ ಓಡ್ತಿದ್ದವನಿಗೆ ಗ್ರಾಮಸ್ಥರು ಬುದ್ದಿ ಕಲಿಸಲು ಹೋಗಿ ಯಮಲೋಕ ತೋರಿಸಿದ್ದಾರೆ. ಗ್ರಾಮಸ್ಥರು ಆತನನ್ನು ಹೊಡೆದು ಕೊಲೆ ಮಾಡಿದ್ದಾರೆ.

ಘಟನೆ ಅಕ್ಟೋಬರ್ 30ರಂದು ನಡೆದಿದೆ ಎನ್ನಲಾಗ್ತಿದೆ. ಈಗ ಘಟನೆಯ ವಿಡಿಯೋ ವೈರಲ್ ಆಗಿದೆ. ವಿಡಿಯೋ ವೈರಲ್ ಆಗ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಮೃತ ವ್ಯಕ್ತಿ ಕೆಲ ದಿನಗಳ ಹಿಂದೆ ಪತ್ನಿ ತವರಿಗೆ ಬಂದಿದ್ದನಂತೆ. ಪತ್ನಿ ಜೊತೆ ಗಲಾಟೆ ಮಾಡಿಕೊಂಡಿದ್ದಾನೆ. ನಂತ್ರ ಪತ್ನಿ ಕತ್ತುಕೊಯ್ದು ಹತ್ಯೆ ಮಾಡಿದ್ದಲ್ಲದೆ ಪತ್ನಿ ತಂದೆ-ತಾಯಿ ಮೇಲೆ ದಾಳಿ ನಡೆಸಿದ್ದಾನೆ.

ಅಲ್ಲಿಂದ ತಪ್ಪಿಸಿಕೊಂಡು ಹೋಗ್ತಿದ್ದ ಆರೋಪಿ ಗ್ರಾಮಸ್ಥರ ಕೈಗೆ ಸಿಕ್ಕಿದ್ದಾನೆ. ಪತ್ನಿ ಸಂಬಂಧಿಕರೆ ಆತನನ್ನು ಹೊಡೆದು ಹತ್ಯೆಗೈದಿದ್ದಾರೆಂದು ಪೊಲೀಸರು ಹೇಳಿದ್ದಾರೆ. ಸ್ಥಳದಲ್ಲಿಯೇ ಆರೋಪಿ ಸಾವನ್ನಪ್ಪಿದ್ದಾನೆಂದು ಪೊಲೀಸರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...