alex Certify
ಕನ್ನಡ ದುನಿಯಾ       Mobile App
       

Kannada Duniya

ಅಫೀಮು ನೀಡಿ ಮಹಿಳೆಯರ ಮೇಲೆ ಅತ್ಯಾಚಾರವೆಸಗ್ತಿದ್ದ ಬಾಬಾ

ಫತೇಹಾಬಾದ್ ತೊಹಾನಾ ಪಟ್ಟಣದಲ್ಲಿ 120 ಮಹಿಳೆಯರ ಮೇಲೆ ಅತ್ಯಾಚಾರವೆಸಗಿರುವ ಅಮರಪುರಿ ಅಲಿಯಾಸ್ ಬಿಲ್ಲು ಬಾಬಾ ಬಗ್ಗೆ ಇನ್ನಷ್ಟು ಮಾಹಿತಿ ಬಹಿರಂಗವಾಗಿದೆ. ಜಲೇಬಿ ಬಾಬಾ ಎಂದೇ ಹೆಸರಾಗಿದ್ದ ಅಮರಪುರಿ, ನಶೆಯಲ್ಲಿರುವ ಮಹಿಳೆಯರು ಹಾಗೂ ಹುಡುಗಿಯರ ಮೇಲೆ ಅತ್ಯಾಚಾರವೆಸಗುತ್ತಿದ್ದನಂತೆ.

ಏಳು ದಿನಗಳ ಪೊಲೀಸ್ ಕಸ್ಟಡಿ ನಂತ್ರ ಬಾಬಾನನ್ನು ಇಂದು ಕೋರ್ಟ್ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಬಾಬಾನನ್ನು ಜೈಲಿಗಟ್ಟಿದೆ. ಈ ವೇಳೆ ಬಾಬಾಗೆ ಸಂಬಂಧಿಸಿದ ಅನೇಕ ವಿಚಾರಗಳು ಬಹಿರಂಗವಾಗಿವೆ. ಅಫೀಮು ಚಟಕ್ಕೆ ಬಿದ್ದಿದ್ದ ಬಾಬಾ ಮಹಿಳೆಯರ ಮೇಲೆ ಅತ್ಯಾಚಾರವೆಸಗುತ್ತಿದ್ದ. ಅದ್ರ ವಿಡಿಯೋ ಮಾಡಿ ನಂತ್ರ ಬ್ಲಾಕ್ಮೇಲ್ ಮಾಡ್ತಿದ್ದ.

ಪಕ್ಕದಲ್ಲಿರುವ ಸ್ಮಶಾನದಲ್ಲಿ ಅಫೀಮು ಅಡಗಿಸಿಟ್ಟಿದ್ದ ಅಮರಪುರಿ ಸ್ವಲ್ಪ ಅಫೀಮನ್ನು ಕಚೇರಿಯಲ್ಲಿಟ್ಟುಕೊಂಡಿದ್ದನಂತೆ. ಸಮಸ್ಯೆಗೆ ಪರಿಹಾರ ಕೇಳಲು ಬರ್ತಿದ್ದ ಮಹಿಳೆಯರಿಗೆ ಟೀಯಲ್ಲಿ ಅಫೀಮು ಹಾಕುತ್ತಿದ್ದ. ಮಹಿಳೆಯರಿಗೆ ನಶೆ ಏರುತ್ತಿದ್ದಂತೆ ಕೋಣೆಗೆ ಕರೆದೊಯ್ದು ಅತ್ಯಾಚಾರವೆಸಗುತ್ತಿದ್ದ. ಅದ್ರ ವಿಡಿಯೋ ಕೂಡ ಮಾಡ್ತಿದ್ದ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...