alex Certify
ಕನ್ನಡ ದುನಿಯಾ       Mobile App
       

Kannada Duniya

ಮಗ ಇಟಲಿಯಲ್ಲಿದ್ದಾನೆಂದುಕೊಂಡಿದ್ರು ಹೆತ್ತವರು, ಆದ್ರೆ….

ಪಂಜಾಬ್ ನ ಬಲ್ವಿಂದರ್ ಸಿಂಗ್ ಹಾಗೂ ಸುರಿಂದರ್ ಕೌರ್ ದಂಪತಿ ತಮ್ಮ ಮಗ ಇಟಲಿಯಲ್ಲಿ ಸೆಟಲ್ ಆಗಿದ್ದಾನೆ ಅಂತಾ ನೆಮ್ಮದಿಯಿಂದಿದ್ರು. 2016ರಲ್ಲಿ 7 ಹೈ ಪ್ರೊಫೈಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 21 ಹರೆಯದ ಪುತ್ರ ಅರೆಸ್ಟ್ ಆದಾಗ ದಂಪತಿ ಆಘಾತಕ್ಕೊಳಗಾಗಿದ್ರು.

ಅವನ ಅಸಲಿ ಹೆಸರು ಹರ್ದೀಪ್ ಸಿಂಗ್. ಆದ್ರೆ ಕ್ರಿಮಿನಲ್ ಲೋಕದಲ್ಲಿ ಶೇರಾ ಎಂದೇ ಗುರುತಿಸಿಕೊಂಡಿದ್ದ. ಹೆತ್ತವರಿಗೇ ಗುರುತು ಸಿಗದಷ್ಟು ಬದಲಾಗಿದ್ದ. ಪಂಜಾಬ್ ನ ಖುಬಾನ್ ಗ್ರಾಮದಲ್ಲಿ ಖುಬಾನ್ ಶೇರಾ ಎಂಬ ದೊಡ್ಡ ರೌಡಿಯಿದ್ದ. 2012ರಲ್ಲಿ ಪೊಲೀಸರು ಅವನನ್ನು ಎನ್ಕೌಂಟರ್ ಮಾಡಿದ್ದರು.

ಅವನಂತೆ ಆಗಬೇಕು ಅನ್ನೋ ಕಾರಣಕ್ಕೆ ಹರ್ದೀಪ್ ತನ್ನ ಹೆಸರನ್ನು ಶೇರಾ ಎಂದು ಬದಲಾಯಿಸಿಕೊಂಡಿದ್ದ. ಎದೆಯ ಮೇಲೆ ಸಿಂಹದ ಚಿತ್ರವನ್ನು ಹಚ್ಚೆ ಹಾಕಿಸಿಕೊಂಡಿದ್ದ. ಹರ್ದೀಪ್ ಹೆಸರು ಕೇಳಿದ್ರೆ ಗ್ರಾಮಸ್ಥರೆಲ್ಲಾ ನಡುಗ್ತಾರೆ, ಅವನ ಮನೆಯ ದಾರಿ ಹೇಳಲು ಕೂಡ ಭಯಪಡ್ತಾರೆ. ಆ ಹೆಸರಿನವರು ಇಲ್ಯಾರೂ ಇಲ್ಲ ಎನ್ನುತ್ತಾರೆ.

10 ವರ್ಷವನಿದ್ದಾಗ ಹರ್ದೀಪ್ ನನ್ನು ಆತನ ದೊಡ್ಡಪ್ಪ ತಮ್ಮೊಂದಿಗೆ ಇಟಲಿಗೆ ಕರೆದೊಯ್ದಿದ್ದರು. 8 ವರ್ಷ ಅಲ್ಲಿ ನೆಲೆಸಿದ್ದ ಆತ ಹೃದಯದ ಸಮಸ್ಯೆ ಕಾಣಿಸಿಕೊಂಡಿದ್ರಿಂದ ಭಾರತಕ್ಕೆ ಮರಳಿದ್ದ. 2 ವರ್ಷಗಳ ಹಿಂದೆ ದೊಡ್ಡಪ್ಪ ಹಾಗೂ ತಂದೆಯ ಜೊತೆ ಜಮೀನಿಗಾಗಿ ಹರ್ದೀಪ್ ಕಿತ್ತಾಟ ನಡೆಸಿದ್ದ.

ಟರ್ಬನ್ ನಿಂದಾಗಿ ನನಗೆ ಕೆಲಸ ಸಿಗುತ್ತಿಲ್ಲ, ಹಾಗಾಗಿ ಕೂದಲು ಕತ್ತರಿಸಿಕೊಳ್ತೇನೆ ಎಂದಿದ್ದ. ತಾನು ಎಲೆಕ್ಟ್ರಿಶಿಯನ್ ಆಗಿ ಇಟಲಿಯಲ್ಲಿ ಕೆಲಸ ಮಾಡ್ತಿದ್ದೇನೆ ಅಂತಾ ಮನೆಯವರನ್ನೆಲ್ಲ ನಂಬಿಸಿದ್ದ. ಯಾವಾಗ್ಲೂ ಮಗ ಜಿಮ್, ವ್ಯಾಯಾಮ ಅಂತೆಲ್ಲ ಬ್ಯುಸಿಯಾಗಿರ್ತಾನೆ ಅನ್ನೋದಷ್ಟೆ ಹೆತ್ತವರಿಗೆ ಗೊತ್ತಿತ್ತು.

ಮಗ ದೊಡ್ಡ ರೌಡಿ ಅನ್ನೋದರ ಸುಳಿವು ಕೂಡ ಇರಲಿಲ್ಲ. ಪೊಲೀಸರು ಮನೆಗೆ ಬಂದು ವಿಚಾರಿಸಿದಾಗ್ಲೇ ಮಗನ ಇನ್ನೊಂದು ಮುಖ ಅವರ ಮುಂದೆ ಬಂದಿದೆ. ಅದೇ ಊರಿನಲ್ಲಿದ್ದುಕೊಂಡೇ ಹರ್ದೀಪ್ ಸಿಂಗ್, ಶೇರಾ ಹೆಸರಿನಲ್ಲಿ ಸಾಕಷ್ಟು ಅಪರಾಧಗಳನ್ನು ಎಸಗಿದ್ದಾನೆ. ಈಗ ಕಂಬಿ ಎಣಿಸ್ತಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...