alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೀತಿ ಉಳಿಸಿಕೊಳ್ಳಲು ಇಂಥ ಕೆಲಸಕ್ಕಿಳಿದ ಯುವಕ..!

ಮಧ್ಯಪ್ರದೇಶದ ಇಂದೋರ್ ನಲ್ಲಿ ಪ್ರೇಮಿಯೊಬ್ಬ ತನ್ನ ಪ್ರೀತಿ ಉಳಿಸಿಕೊಳ್ಳಲು ವಿಚಿತ್ರ ಕೆಲಸಕ್ಕೆ ಕೈ ಹಾಕಿದ್ದಾನೆ. ಪ್ರಿಯತಮೆಗೆ ಬೇರೆ ಮದುವೆಯಾಗ್ತಿದೆ ಎಂಬುದು ಗೊತ್ತಾಗ್ತಿದ್ದಂತೆ ಆಕೆ ಮಾವನನ್ನು ಅಪಹರಿಸಿದ್ದಾನೆ. ಮಗಳನ್ನು ಬಿಟ್ಟು ಮಗನನ್ನು ಕರೆದೊಯ್ರಿ ಎಂದು ಫೋನ್ ಮೂಲಕ ಧಮಕಿ ಹಾಕಿದ್ದಾನೆ.

ಆರೋಪಿ ಆಶಿಶ್ ಅನೇಕ ದಿನಗಳಿಂದ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆಕೆ ಮನೆಯವರಿಗೆ ವಿಷ್ಯ ಗೊತ್ತಾಗಿ ಸಂಧಾನ ಕೂಡ ನಡೆದಿತ್ತು. ಹುಡುಗಿ ಮನೆಯವರು ಆಶಿಶ್ ಗೆ ಮಗಳನ್ನು ಕೊಡುವುದಾಗಿ ಹೇಳಿದ್ದರು. ಆದ್ರೆ ಬೇರೆ ಹುಡುಗನ ಜೊತೆ ಮದುವೆ ನಿಶ್ಚಯಿಸಿದ್ದಾರೆ.

ಈ ಸಂಗತಿ ತಿಳಿದ ಆಶಿಶ್ ಹುಡುಗಿ ಮಾವನನ್ನು ಕಿಡ್ನಪ್ ಮಾಡಿದ್ದಾನೆ. ನಂತ್ರ ಫೋನ್ ಮಾಡಿ ಧಮಕಿ ಹಾಕಿದ್ದಾನೆ. ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಂತೆ ಭಯಗೊಂಡ ಆಶಿಶ್ ಕಾಡಿನಲ್ಲಿ ಹುಡುಗಿ ಮಾವನನ್ನು ಬಿಟ್ಟು ಹೋಗಿದ್ದಾನೆ.

ಪ್ರಾಣ ರಕ್ಷಿಸಿಕೊಂಡು ಮನೆಗೆ ಬಂದ ಮಾವ ಆಶಿಶ್ ಜೊತೆ ಐದು ಮಂದಿಯಿದ್ದಾರೆ. ಅವರ ಬಳಿ ಪಿಸ್ತೂಲ್ ಕೂಡ ಇದೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...