alex Certify
ಕನ್ನಡ ದುನಿಯಾ       Mobile App
       

Kannada Duniya

ಮನ ಕಲಕುತ್ತೆ ಈ ಹುಡುಗಿಯ ದುರಂತ ಸಾವು

ದೆಹಲಿಯ ದ್ವಾರಕಾದಲ್ಲಿ ಮಂಗಳವಾರ ಬೆಳಿಗ್ಗೆ 15 ವರ್ಷದ ಬಾಲಕಿಯೊಬ್ಬಳು ತನ್ನ ಮನೆಯಲ್ಲೇ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದು, ಆದರೆ ಆಕೆಯ ಸಾವಿಗೆ ಕಾರಣವೇನು ಎಂಬುದನ್ನು ತಿಳಿದರೆ ಕಲ್ಲು ಹೃದಯವೂ ಮರುಗುತ್ತೆ.

10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಈ ಬಾಲಕಿ ತನ್ನ ಕುಟುಂಬದೊಂದಿಗೆ ದ್ವಾರಕಾದಲ್ಲಿ ವಾಸಿಸುತ್ತಿದ್ದಳು, ಆಟೋಮೊಬೈಲ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಬಾಲಕಿಯ ತಂದೆಗೆ ಕೆಲ ದಿನಗಳ ಹಿಂದಷ್ಟೇ ಶಸ್ತ್ರ ಚಿಕಿತ್ಸೆ ನಡೆದಿತ್ತು.

ಹೀಗಾಗಿ ಆತ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದು, ಕೆಲಸಕ್ಕೂ ಹೋಗದ ಕಾರಣ ಕುಟುಂಬ ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿತ್ತು. ಬ್ಯಾಂಕ್ ನಲ್ಲಿ ಸ್ವಲ್ಪ ಹಣ ಇಟ್ಟುಕೊಂಡಿದ್ದ ಬಾಲಕಿಯ ತಂದೆ, ಸೋಮವಾರದಂದು ಮಗಳ ಕೈಗೆ ಎಟಿಎಂ ಕಾರ್ಡ್ ನೀಡಿ 6 ಸಾವಿರ ರೂ. ಡ್ರಾ ಮಾಡಿಕೊಂಡು ಬರುವಂತೆ ತಿಳಿಸಿದ್ದಾರೆ.

ಅದರಂತೆ ಬಾಲಕಿ ಮನೆ ಸಮೀಪದಲ್ಲೇ ಇದ್ದ ಎಟಿಎಂ ಗೆ ಹೋಗಿ 6 ಸಾವಿರ ಡ್ರಾ ಮಾಡಿದ್ದಾಳೆ. ಆಗ ಹಿಂದೆ ನಿಂತಿದ್ದ ಇಬ್ಬರು, ಬಾಲಕಿಗೆ ರಶೀದಿ ಬರಬೇಕೆಂದರೆ ಮತ್ತೊಮ್ಮೆ ಎಟಿಎಂ ಕಾರ್ಡ್ ಹಾಕುವಂತೆ ತಿಳಿಸಿದ್ದು, ಅವರು ಹೇಳಿದಂತೆ ಮಾಡಿದ ಬಾಲಕಿ ಬಳಿಕ ಮನೆಗೆ ತೆರಳಿದ್ದಾಳೆ. ಆಗ ಈ ಇಬ್ಬರು ಖದೀಮರು ಬಾಲಕಿಯ ತಂದೆಯ ಖಾತೆಯಿಂದ ಸುಮಾರು 29 ಸಾವಿರ ರೂ. ಡ್ರಾ ಮಾಡಿಕೊಂಡು ಪರಾರಿಯಾಗಿದ್ದಾರೆ.

ಮನೆಯಲ್ಲಿದ್ದ ಬಾಲಕಿ ತಂದೆಯ ಮೊಬೈಲ್ ಗೆ ಇಷ್ಟು ಮೊತ್ತದ ಹಣ ಡ್ರಾ ಆಗಿರುವ ಮೆಸೇಜ್ ಬಂದಾಗ ಗಾಬರಿಗೊಳಗಾಗಿದ್ದಾರೆ. ಮುಂಚೆಯೇ ಹಣದ ಮುಗ್ಗಟ್ಟಿನಲ್ಲಿದ್ದುದರಿಂದ ಮನೆಗೆ ಬಂದ ಬಾಲಕಿ ಬಳಿ ವಿಚಾರಿಸಿದಾಗ ಆಕೆ ನಡೆದ ವಿಷಯ ತಿಳಿಸಿದ್ದಾಳೆ. ಕೂಡಲೇ ಈ ಕುಟುಂಬ ಪೊಲೀಸರಿಗೆ ದೂರು ನೀಡಿತಾದರೂ ಯಾವುದೇ ಪ್ರಯೋಜನವಾಗಿಲ್ಲ.

ತನ್ನ ತಪ್ಪಿನಿಂದಾಗಿ ಕುಟುಂಬ ಸಂಕಷ್ಟ ಎದುರಿಸುವಂತಾಯಿತಲ್ಲ ಎಂಬ ಕೊರಗಿನಿಂದ ಬಾಲಕಿ ದುಡುಕಿನ ನಿರ್ಧಾರ ಕೈಗೊಂಡಿದ್ದು, ಮನೆಯಲ್ಲೇ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾಳೆ. ಇದೀಗ ಪೊಲೀಸರು ಬಾಲಕಿಯನ್ನು ವಂಚಿಸಿದ ಖದೀಮರ ಪತ್ತೆಗೆ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...