alex Certify
ಕನ್ನಡ ದುನಿಯಾ       Mobile App
       

Kannada Duniya

ಪೂಜೆ ನೆಪದಲ್ಲಿ ತೀರ್ಥ ನೀಡಿ ಬಂಗಾರ ದೋಚಿದ ಪೂಜಾರಿ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಂಚನೆ ಪ್ರಕರಣ ಹೆಚ್ಚಾಗ್ತಿದೆ. ಕಳ್ಳ ಪೂಜಾರಿಗಳ ಹಾವಳಿ ದಿನದಿಂದ ದಿನಕ್ಕೆ ಜಾಸ್ತಿಯಾಗಿದೆ. ಪಾರ್ಶ್ಚವಾಯು ಗುಣಪಡಿಸುವ ನೆಪದಲ್ಲಿ ಬಂದ ನಕಲಿ ಪೂಜಾರಿಯೊಬ್ಬ ಮೋಸ ಮಾಡಿ ಬಂಗಾರ ದೋಚಿದ್ದಾನೆ.

ಘಟನೆ ಬೆಂಗಳೂರಿನ ಬಿಟಿಎಂ ಲೇಔಟ್ ನ ಒಂದನೇ ಹಂತದಲ್ಲಿ ನಡೆದಿದೆ. ಮಾಧ್ಯಮಗಳ ವರದಿ ಪ್ರಕಾರ  ಅಶ್ವತ್ಥ ಎಂಬುವವರ ಮನೆಗೆ ಪೂಜಾರಿ ಬಂದಿದ್ದಾನೆ. ಪಾರ್ಶ್ಚವಾಯು ಗುಣಪಡಿಸುವುದಾಗಿ ಮನೆಗೆ ಬಂದಿದ್ದ ಎನ್ನಲಾಗಿದೆ. ಪೂಜೆ ಮಾಡಿ ನಂತ್ರ ತನ್ನ ಬ್ಯಾಗ್ ನಲ್ಲಿದ್ದ ನಿದ್ರೆ ಬರುವ ನೀರನ್ನು ತೀರ್ಥದ ರೂಪದಲ್ಲಿ ನೀಡಿದ್ದಾನೆ. ಪೂಜಾರಿ ನಂಬಿ ತೀರ್ಥ ಕುಡಿದವರಿಗೆ ಪ್ರಜ್ಞೆ ತಪ್ಪಿದೆ.

ಸಮಯ ಸಾಧಿಸಿದ ಪೂಜಾರಿ ಮನೆಯಲ್ಲಿದ್ದ  ಬಂಗಾರವನ್ನು ದೋಚಿದ್ದಾನೆ ಎನ್ನಲಾಗಿದೆ. ಮೈಮೇಲೆ ಹಾಕಿಕೊಂಡಿದ್ದ ಒಡವೆಯನ್ನೂ ಪೂಜಾರಿ ಬಿಟ್ಟಿಲ್ಲ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...