alex Certify
ಕನ್ನಡ ದುನಿಯಾ       Mobile App
       

Kannada Duniya

ಸಂತಾನ ಪ್ರಾಪ್ತಿಗೆ ಬಂದ ದಂಪತಿಗೆ ಕಣ್ಣ ಮುಂದೆಯೇ ಸಂಬಂಧ ಬೆಳೆಸಲು ಹೇಳಿದ ನಕಲಿ ವೈದ್ಯ

ಮಹಾರಾಷ್ಟ್ರದ ಥಾಣೆಯಲ್ಲಿ ನಕಲಿ ವೈದ್ಯನೊಬ್ಬ ಕೆಟ್ಟದಾಗಿ ನಡೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ನಪುಂಸಕತೆಗೆ ಚಿಕಿತ್ಸೆ ನೀಡುತ್ತಿದ್ದ ನಕಲಿ ವೈದ್ಯನೊಬ್ಬ ಸಂತಾನ ಪ್ರಾಪ್ತಿಗೆ ಬಂದ ದಂಪತಿಗೆ ಕೆಟ್ಟ ಸಲಹೆ ನೀಡಿದ್ದಾನೆ. ಘಟನೆ 2016ರಲ್ಲಿ ನಡೆದಿದ್ದು, ಕೋರ್ಟ್ ಆತನಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ದಂಪತಿಗೆ 10 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಸೂಚನೆ ನೀಡಿದೆ.

2014ರಲ್ಲಿ ಮಕ್ಕಳಿರದ ದಂಪತಿ, ಯೋಗೇಶ್ ಹೆಸರಿನ ಈತನನ್ನು ಚಿಕಿತ್ಸೆಗಾಗಿ ಭೇಟಿಯಾಗಿದ್ದಾರೆ. ಎರಡು ವರ್ಷ ಚಿಕಿತ್ಸೆ ನೀಡಿದ ಯೋಗೇಶ್, ದಂಪತಿ ಮಕ್ಕಳಿಗಾಗಿ ಏನು ಮಾಡಲೂ ಸಿದ್ಧ ಎಂಬುದನ್ನು ಮನಗಂಡಿದ್ದಾನೆ. 2016ರಲ್ಲಿ ತನ್ನ ಮುಂದೆಯೇ ಸಂಬಂಧ ಬೆಳೆಸಲು ಹೇಳಿದ್ದಾನೆ. ನೀವು ಏನು ತಪ್ಪು ಮಾಡುತ್ತಿದ್ದೀರಿ ಎಂಬುದು ನನಗೆ ಅರ್ಥವಾಗಬೇಕು. ಆಗ ಸೂಕ್ತ ಸಲಹೆ ನೀಡಲು ಸಾಧ್ಯವೆಂದು ಹೇಳಿದ್ದಾನೆ.

ಘಟನೆ ನಂತ್ರ ಒತ್ತಡಕ್ಕೊಳಗಾಗಿದ್ದ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದಳಂತೆ. ನಂತ್ರ ದಂಪತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...