alex Certify
ಕನ್ನಡ ದುನಿಯಾ       Mobile App
       

Kannada Duniya

3,500 ರೂ. ಬೆಲೆಯ ನಕಲಿ ವಜ್ರವನ್ನು 1.2 ಕೋಟಿ ರೂ. ಗೆ ಮಾರಾಟ ಮಾಡಿದ ಖದೀಮರು

ಕೇವಲ 3,500 ರೂ. ಬೆಲೆ ಬಾಳುವ ನಕಲಿ ವಜ್ರವನ್ನು ಖದೀಮರು ಉದ್ಯಮಿಯೊಬ್ಬರಿಗೆ 1.2 ಕೋಟಿ ರೂ. ಗಳಿಗೆ ಮಾರಾಟ ಮಾಡಿದ್ದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಮಹಮ್ಮದ್ ಅತರ್ ಸಿದ್ದಿಕಿ ಹಾಗೂ ಮಹಮದ್ ಸಲಾಂ ಖಾನ್, ಮುತ್ತು ಮತ್ತು ಹವಳಗಳ ವ್ಯಾಪಾರಿಗಳಾಗಿದ್ದು, ತಮ್ಮ ವ್ಯವಹಾರದಲ್ಲಿ ತೀವ್ರ ನಷ್ಟ ಅನುಭವಿಸಿದ್ದ ಕಾರಣ ಅದನ್ನು ಸರಿದೂಗಿಸಲು ಖತರ್ನಾಕ್ ಪ್ಲಾನ್ ಮಾಡಿದ್ದಾರೆ.

ಸ್ಥಳೀಯ ಮಾರುಕಟ್ಟೆಯಲ್ಲಿ 3,500 ರೂ.ಗೆ ನಕಲಿ ವಜ್ರನನ್ನು ಖರೀದಿಸಿದ ಇವರುಗಳು ಉದ್ಯಮಿಯೊಬ್ಬರಿಗೆ ಇದು ಅಸಲಿ ವಜ್ರವೆಂದೇ ನಂಬಿಸಿದ್ದಾರೆ. ಅಲ್ಲದೆ ಆತನಿಗೆ 1.2 ಕೋಟಿ ರೂ. ಗಳಿಗೆ ಆ ವಜ್ರವನ್ನು ಮಾರಾಟ ಮಾಡಿದ್ದಾರೆ.

ವಜ್ರ ಖರೀದಿಸಿದ ಉದ್ಯಮಿ ಅದನ್ನು ಪರೀಕ್ಷಿಸಿದಾಗ ಅಸಲಿಯತ್ತು ಬಹಿರಂಗವಾಗಿದ್ದು, ವಂಚನೆಗೊಳಗಾದ ಉದ್ಯಮಿ ದೂರು ನೀಡಿದ ಮೇರೆಗೆ ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...