alex Certify
ಕನ್ನಡ ದುನಿಯಾ       Mobile App
       

Kannada Duniya

ನಕಲಿ ನೋಟು ತಯಾರಿಸಿ ಇವರು ಮಾಡಿದ್ದೇನು ಗೊತ್ತಾ?

audi_lk3ukxp

ಪಂಜಾಬ್ ನ ಮೊಹಾಲಿಯಲ್ಲಿ ಸುಮಾರು 2 ಕೋಟಿ ನಕಲಿ ನೋಟುಗಳು ಮಾರುಕಟ್ಟೆಗೆ ಬಂದಿವೆ. ಸಹೋದರ-ಸಹೋದರಿಯರಿಬ್ಬರು 2 ಸಾವಿರ ರೂಪಾಯಿ ಹೊಸ ನೋಟನ್ನು ಸ್ಕ್ಯಾನ್ ಮಾಡಿ ನಕಲಿ ನೋಟು ತಯಾರಿಸಿದ್ದಾರೆ. ನಂತ್ರ  ಕಪ್ಪುಹಣವನ್ನು ಬಿಳಿ ಹಣ ಮಾಡುವ ಆಮಿಷ ತೋರಿಸಿ ಮಾರುಕಟ್ಟೆಗೆ ಬಿಟ್ಟಿದ್ದಾರೆ.

ಕಾರ್ಯಾಚರಣೆಗಿಳಿದ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. ನಕಲಿ ನೋಟು ಚಲಾವಣೆ ಮಾಡಿ ಆಡಿ ಕಾರ್ ಖರೀದಿಸಿರುವುದಾಗಿ ಇವರು ತಿಳಿಸಿದ್ದಾರೆ. 21 ವರ್ಷದ ಬಿಟೆಕ್ ವಿದ್ಯಾರ್ಥಿ ಅಭಿನವ್ ವರ್ಮಾ ಹಾಗೂ 20 ವರ್ಷದ ವಿಶಾಖಾ ವರ್ಮಾ ಈ ಕೃತ್ಯವೆಸಗಿದ್ದಾರೆ.

ಆಡಿ ಕಾರ್ ಜೊತೆ ಅಭಿನವ್ ವರ್ಮಾ, ವಿಶಾಖಾ ಹಾಗೂ ಮಧ್ಯವರ್ತಿ ಸುಮನ್ ನನ್ನು ಬಂಧಿಸಲಾಗಿದೆ. 62 ಲಕ್ಷ ರೂಪಾಯಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಲ್ಕು ದಿನಗಳ ಹಿಂದೆ 20 ಲಕ್ಷಕ್ಕೆ ಸೆಕೆಂಡ್ ಹ್ಯಾಂಡ್ ಆಡಿ ಕಾರ್ ಖರೀದಿ ಮಾಡಿದ್ದರು ಎನ್ನಲಾಗಿದೆ. ಮಧ್ಯಮ ವರ್ಗದ ಕುಟುಂಬದವರಾದ ಆರೋಪಿಗಳು ಆದಷ್ಟು ಬೇಗ ಶ್ರೀಮಂತರಾಗಲು ಬಯಸಿದ್ದರಂತೆ. ಹಾಗಾಗಿ ಈ ಕೆಲಸಕ್ಕೆ ಇಳಿದಿರುವುದಾಗಿ ಒಪ್ಪಿಕೊಂಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...