alex Certify
ಕನ್ನಡ ದುನಿಯಾ       Mobile App
       

Kannada Duniya

ಒತ್ತಾಯದ ಮದುವೆ ವೇಳೆ ಕಣ್ಣೀರಿಟ್ಟ ವರ

ಬಿಹಾರದಲ್ಲಿ ಒತ್ತಾಯ ಪೂರ್ವಕ ಮದುವೆಯೊಂದು ನಡೆದಿದೆ. ಈ ಮದುವೆ ಬಗ್ಗೆ ಯಾರೂ ಬಹಿರಂಗವಾಗಿ ಮಾತನಾಡ್ತಿಲ್ಲ. ಆದ್ರೆ ಮದುವೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪಾಟ್ನಾ ಜಿಲ್ಲೆಯ ಪಂಡಾರಕ್ ನಲ್ಲಿ ಬೊಕಾರೋ ಸ್ಟೀಲ್ ಸಿಟಿಯಲ್ಲಿ ಜ್ಯೂನಿಯರ್ ಮ್ಯಾನೇಜರ್ ಆಗಿರುವ ವಿನೋದ್ ಯಾದವ್ ಮದುವೆ ಬಲವಂತವಾಗಿ ನಡೆದಿದೆ. ಬಂದೂಕು ತೋರಿಸಿ ಹುಡುಗಿ ಕಡೆಯವರು ವಿನೋದ್ ಗೆ ಮದುವೆ ಮಾಡಿಸಿದ್ದಾರೆ.

ವಿನೋದ್ ಮದುವೆ ಬೇಡವೆಂದು ಹುಡುಗಿ ಕಡೆಯವರನ್ನು ಬೇಡಿಕೊಳ್ತಾನೆ. ಆದ್ರೆ ಹುಡುಗಿ ಕಡೆಯವರು ಯಾವುದಕ್ಕೂ ಬೆಲೆ ಕೊಡುವುದಿಲ್ಲ. ಈಗ ವಿನೋದ್ ಪಾಟ್ನಾ ಎಸ್ಪಿಗೆ ನೆರವಿನ ಮನವಿ ಸಲ್ಲಿಸಿದ್ದಾನೆ.

ಸುರೇಂದ್ರ ಯಾದವ್ ಹಾಗೂ ಆತನ ಸ್ನೇಹಿತರು ವಿನೋದ್ ನನ್ನು ಅಪಹರಿಸಿ ಮದುವೆ ಮಾಡಿದ್ದಾರೆ. ಮದುವೆ ವೇಳೆ ವಿನೋದ್ ಕಣ್ಣೀರಿಡುತ್ತಿದ್ದಾನೆ. ಇದನ್ನು ವಿಡಿಯೋ ಕೂಡ ಮಾಡಲಾಗಿದೆ. ದೂರಿನ ಮೇಲೆ ಸುರೇಂದ್ರ ಮನೆಗೆ ದಾಳಿ ನಡೆಸಿದ ಪೊಲೀಸರು ವಿನೋದ್ ನನ್ನು ರಕ್ಷಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...