alex Certify
ಕನ್ನಡ ದುನಿಯಾ       Mobile App
       

Kannada Duniya

ಸಾವಿನಂಚಿನಲ್ಲಿದ್ದ ಮಹಿಳೆಗೂ ಲೈಂಗಿಕ ಕಿರುಕುಳ

ಮುಂಬೈನ ಎಲ್ಫಿನ್ ಸ್ಟೋನ್ ರೈಲು ನಿಲ್ದಾಣದಲ್ಲಿ ನಡೆದ ಕಾಲ್ತುಳಿತ ಇಡೀ ದೇಶದ ಜನತೆಯನ್ನು ಬೆಚ್ಚಿ ಬೀಳಿಸಿದೆ. ಈ ಕಾಲ್ತುಳಿತದಲ್ಲಿ 23 ಮಂದಿ ಪ್ರಾಣ ಕಳೆದುಕೊಂಡಿದ್ದು, 30 ಜನರು ಗಾಯಗೊಂಡಿದ್ದಾರೆ. ಈ ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡಿರುವ ಮಹಿಳೆಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿರೋದು ಬೆಳಕಿಗೆ ಬಂದಿದೆ.

ಮುಂಬೈ ನಿವಾಸಿ ಜಯಶ್ರೀ ಕಾನಡೆ ದುರಂತ ನಡೆದಾಗ ಅದೇ ರೈಲು ನಿಲ್ದಾಣದಲ್ಲಿದ್ಲು. ನೂಕು ನುಗ್ಗಲು ಶುರುವಾಗ್ತಿದ್ದಂತೆ ಕೆಲವರು ಮಹಿಳೆಯರ ಹಣ ಆಭರಣ ದೋಚಲು ಶುರು ಮಾಡಿದ್ರು. ಸಹಾಯಕ್ಕಾಗಿ ಬೇಡಿದ ಮಹಿಳೆಗೂ ಲೈಂಗಿಕ ಕಿರುಕುಳ ನೀಡಿರೋದನ್ನು ಖುದ್ದು ಜಯಶ್ರೀ ನೋಡಿದ್ದಾರೆ.

ಅದಾಗಿ ಕೆಲಹೊತ್ತಿನಲ್ಲೇ ಆ ಮಹಿಳೆಯ ಪ್ರಾಣಪಕ್ಷಿ ಹಾರಿಹೋಗಿತ್ತು. ಅಂತಹ ಕಾಮುಕರಿಗೆ ತಕ್ಕ ಶಿಕ್ಷೆ ಆಗಬೇಕೆಂದು ಒತ್ತಾಯಿಸಿದ್ದಾರೆ. ದಸರಾ ಹಬ್ಬದ ಹಿನ್ನೆಲೆಯಲ್ಲಿ ಮಹಿಳೆಯರೆಲ್ಲ ಸೀರೆ ಉಟ್ಟು ಬಂದಿದ್ರು. ಅವರಿಗೆ ಸಹಾಯ ಮಾಡುವ ನೆಪದಲ್ಲಿ ಸೀರೆಯನ್ನು ಹರಿದು ಕ್ರೂರವಾಗಿ ವರ್ತಿಸಿದ್ದಾರೆ ಕೆಲವರು. ಈ ವಿಡಿಯೋ ಕೂಡ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...