alex Certify
ಕನ್ನಡ ದುನಿಯಾ       Mobile App
       

Kannada Duniya

ಅಪಹರಣಕ್ಕೊಳಗಾದ ಬಾಲಕಿ ಶವ ಅಲ್ಲಿತ್ತು

ಹರ್ಯಾಣದ ಅಂಬಾಲದಲ್ಲಿ ಆಘಾತಕಾರಿ ಘಟನೆ ನಡೆದಿದೆ. 11ನೇ ತರಗತಿ ವಿದ್ಯಾರ್ಥಿಯೊಬ್ಬ 5 ವರ್ಷದ ಬಾಲಕಿಯನ್ನು ಹತ್ಯೆಗೈದಿದ್ದಾನೆ. ನೀರಿನಲ್ಲಿ ಮುಳುಗಿಸಿ ಬಾಲಕಿ ಹತ್ಯೆ ಮಾಡಿದ ಆರೋಪಿ ನಂತ್ರ ಶವವನ್ನು ಕೂಲರ್ ನಲ್ಲಿ ಬಚ್ಚಿಟ್ಟಿದ್ದಾನೆ.

ಮನೆಯಿಂದ ಕೆಲವೇ ದೂರದಲ್ಲಿದ್ದ ಅಜ್ಜನ ಅಂಗಡಿಗೆ ಟೀ ನೀಡಿ ಬರ್ತಿದ್ದ ವೈಷ್ಣವಿಯನ್ನು ಆರೋಪಿ ಅಪಹರಿಸಿದ್ದ. ಅಪಹರಣದ ದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ದೂರು ದಾಖಲಿಸಿಕೊಂಡು ಪೊಲೀಸರು ವೈಷ್ಣವಿ ಹುಡುಕಾಟ ಶುರುಮಾಡಿದ್ದರು. ಈ ಮಧ್ಯೆ ಆರೋಪಿ ಕುಟುಂಬಸ್ಥರಿಗೆ ಕರೆ ಮಾಡಿ 20 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆಯಿಟ್ಟಿದ್ದ ಎನ್ನಲಾಗಿದೆ.

ಆಗ ಅಲರ್ಟ್ ಆದ ಪೊಲೀಸರು ಫೋನ್ ನಂಬರ್ ಟ್ರೇಸ್ ಮಾಡಿದ್ದಾರೆ. ವಿದ್ಯಾರ್ಥಿ ಫೋನ್ ಇರುವ ಸ್ಥಳ ಉತ್ತರ ಪ್ರದೇಶ ತೋರಿಸುತ್ತಿತ್ತು ಎನ್ನಲಾಗಿದೆ. ತಡರಾತ್ರಿಯವರೆಗೆ ಸೈಬರ್ ನಲ್ಲಿ ಸರ್ಚ್ ಮಾಡಿದ ಪೊಲೀಸರಿಗೆ ವಿದ್ಯಾರ್ಥಿಯಿರುವ ಸ್ಥಳ ಗೊತ್ತಾಗಿದೆ. ಎಲ್ಲ ಕಡೆ ನಾಕಾಬಂಧಿ ಮಾಡಿ ಮನೆ ಮೇಲೆ ದಾಳಿ ನಡೆಸಿದ್ದಾರೆ. ಆದ್ರೆ ವೈಷ್ಣವಿಯನ್ನು ಆಗ್ಲೇ ಕೊಲೆ ಮಾಡಿದ್ದ ವಿದ್ಯಾರ್ಥಿ ಶವವನ್ನು ಕೂಲರ್ ನಲ್ಲಿ ಬಚ್ಚಿಟ್ಟಿದ್ದ. ಈ ಪ್ರಕರಣದಲ್ಲಿ ವಿದ್ಯಾರ್ಥಿ ಜೊತೆ ಯಾರೆಲ್ಲ ಕೈಜೋಡಿಸಿದ್ದಾರೆನ್ನುವ ಬಗ್ಗೆ ಪೊಲೀಸ್ ತನಿಖೆ ಶುರು ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...