alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲ್ವೆ ನಿಲ್ದಾಣದಲ್ಲಿ 8 ತಿಂಗಳ ಮಗುವಿನ ಜೊತೆ ನಡೀತು ಇಂಥ ಘಟನೆ

ರೈಲ್ವೆ ನಿಲ್ದಾಣದಲ್ಲಿ 8 ತಿಂಗಳ ಮಗುವನ್ನು ಅಪಹರಿಸಲಾಗಿದೆ. ಇದನ್ನು ತಿಳಿದ ತಂದೆ-ತಾಯಿ ಅತ್ತು ಅತ್ತು ಪ್ರಜ್ಞೆ ತಪ್ಪಿದ್ದಾರೆ. ಸ್ಥಳೀಯರಿಗೆ ಏನು ಮಾಡಬೇಕೆಂಬುದು ಗೊತ್ತಾಗಲಿಲ್ಲ. ಘಟನೆ ಹರ್ಯಾಣದ ಪಾಣಿಪತ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಕಾಲ್ಕಾದಿಂದ ಪಾಣಿಪತ್ ಗೆ ಕಂಬಳಿ ಮಾರಾಟ ಮಾಡಲು ಬಂದಿದ್ದ ದಂಪತಿ ಮಗುವನ್ನು ಅಪಹರಿಸಲಾಗಿದೆ. ಮಗು ರಾತ್ರಿ ತಾಯಿ ಬಳಿ ಮಲಗಿತ್ತು. ಮಧ್ಯ ರಾತ್ರಿ ಎಚ್ಚರವಾದಾಗ ಮಗು ಇರಲಿಲ್ಲ. ಸುತ್ತಮುತ್ತ ವಿಚಾರಿಸಿದ್ದಾರೆ. ಈ ಬಗ್ಗೆ ರೈಲ್ವೆ ಪೊಲೀಸರಿಗೆ ದೂರು ನೀಡಲಾಗಿದೆ. ಆದ್ರೆ ಇದು ನಮ್ಮ ಜವಾಬ್ದಾರಿಯಲ್ಲವೆಂದು ಪೊಲೀಸರು ಮುಖ ತಿರುಗಿಸಿದ್ದಾರೆ.

ಪಾಣಿಪತ್ ರೈಲ್ವೆ ನಿಲ್ದಾಣದಲ್ಲಿ ಮಗು ಕಳುವಾಗಿದ್ದರಿಂದ ಪಾಲಕರು ಕಳೆದ ಎರಡು ದಿನಗಳಿಂದ ಪಾಣಿಪತ್ ನಲ್ಲಿ ಮಗುವಿನ ಹುಡುಕಾಟ ನಡೆಸುತ್ತಿದ್ದಾರೆ. ರೈಲ್ವೆ ನಿಲ್ದಾಣದ ಸಿಸಿ ಟಿವಿ ಹಾಳಾಗಿದ್ದು, ಆರೋಪಿ ಪತ್ತೆಗೆ ಮತ್ತಷ್ಟು ವಿಳಂಬವಾಗ್ತಿದೆ. ಮಗುವನ್ನು ಯಾರೋ ಅಪಹರಿಸಿದ್ದಾರೆಂದು ದಂಪತಿ ದೂರಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...